

Suicide: ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿ ಸಿಗುವುದಿಲ್ಲ ಎಂದು ಭಾವಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಬೋಯಿನಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ನಂದಮೂರಿ ನಗರದಲ್ಲಿ ಶುಕ್ರವಾರ (ಸೆ.12) ನಡೆದಿದೆ.
ವಂಶಿ (24) ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲತಃ ನಿಜಾಮಾಬಾದ್ ಮೂಲದ ವಂಶಿ ಜೀವನೋಪಾಯವನ್ನು ಹುಡುಕಿಕೊಂಡು ಹೈದರಾಬಾದ್ ನಗರಕ್ಕೆ ಬಂದು ತನ್ನ ತಂಗಿ ಭೂಮವ್ವ ಜೊತೆ ಬೋಯಿನಪ್ಪಲ್ಲಿಯ ನಂದಮೂರಿ ನಗರದಲ್ಲಿ ಕೆಲಸ ಮಾಡುತ್ತಾ ವಾಸಿಸುತ್ತಿದ್ದ ಎನ್ನಲಾಗಿದೆ.
ಮೃತ ವಂಶಿ ತನ್ನ ಸಂಬಂಧಿಕರ ಮಗಳಾದ ಶ್ರೀಜಾಳನ್ನ ಪ್ರೀತಿಸುತ್ತಿದ್ದನು. ಈ ವಿಷಯ ಕೆಲವು ಸಂಬಂಧಿಕರಿಗೆ ತಿಳಿದಿದೆ. ಇತ್ತೀಚೆಗೆ ಹತ್ತಿರದ ಸಂಬಂಧಿಯೊಬ್ಬರ ಮರಣದ ನಂತರ ಅಲ್ಲಿಗೆ ಹೋಗಿದ್ದ ವಂಶಿಯನ್ನು ಶ್ರೀಜಾಳನ್ನು ಪ್ರೀತಿಸುವ ಕಾರಣಕ್ಕೆ ಗಲಾಟೆ ಮಾಡಿದ್ದಾರೆ. ಹುಡುಗಿಯನ್ನು ಬಿಟ್ಟುಬಿಡು ಎಂದು ಬೆದರಿಸಿದ್ದಾರೆ.
ಅದೇ ದಿನ ವಂಶಿ ಪಾಪಣ್ಣಪೇಟೆಯಲ್ಲಿರುವ ಕಾಲೇಜಿಗೆ ಹೋಗಿ ಅಲ್ಲಿ ಶ್ರೀಜಾಳನ್ನು ಭೇಟಿಯಾಗಿದ್ದಾನೆ. ಈ ವೇಳೆ ತಾನೂ ಪ್ರೀತಿಸುತ್ತಿದ್ದ ಯುವತಿ ನಾವಿಬ್ಬರು ದೂರ ಆಗೋಣ ಎಂದು ಹೇಳಿದ್ದು, ಇನ್ಮುಂದೆ ನನಗೆ ತೊಂದರೆ ಕೊಡಬೇಡ ಎಂದು ಹೇಳಿದ್ದಾಳೆ. ಇದರಿಂದ ತುಂಬಾ ನಿರಾಶೆಯಾದ ವಂಶಿ ಮನೆಗೆ ಬಂದು ತುಂಬಾ ಚಿಂತಿತನಾಗಿ ಅದೇ ರಾತ್ರಿ ಮನೆಯಲ್ಲಿ ಎಲ್ಲರೂ ಸಂಬಂಧಿಕರು ಮಲಗಿದ ನಂತರ ಕಾಲೇಜಿಗೆ ಹೋಗಿದ್ದಾನೆ.
ರಾತ್ರಿ ಸಮಯದಲ್ಲಿ ತನ್ನ ಸೋದರಮಾವ ಜಲ್ಲಾ ಶಿವಯ್ಯನಿಗೆ ಕರೆ ಮಾಡಿ, ತಾನೂ ಮನೆಯಿಂದ ಹೊರಹೋಗಿದ್ದು, ನೇಣು ಹಾಕಿಕೊಂಡು ಸಾಯುತ್ತಿದ್ದೇನೆ ಎಂದು ಹೇಳಿದ್ದಾನೆ. ತಕ್ಷಣ ಎಲ್ಲ ಕುಟುಂಬಸ್ಥರು ನಗರದಲ್ಲಿ ಹುಡುಕಲು ಪ್ರಾರಂಭಿಸಿದ್ದಾರೆ. ಆದರೆ ಆ ರಾತ್ರಿ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆ ನಂದಮೂರಿ ನಗರ ರೈಲ್ವೆ ಹಳಿ ಪಕ್ಕದ ಮರದಲ್ಲಿ ನೇಣು ಹಾಕಿಕೊಂಡಿರುವುದು ಪತ್ತೆಯಾಗಿದೆ.
ಘಟನಾ ಸ್ತಳಕ್ಕೆ ಬೋಯಿನಪಲ್ಲಿ ಪೊಲೀಸರು ಆಗಮಿಸಿ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)