ಹೊಸಪೇಟೆಯಲ್ಲಿ ಚಲಿಸುವ ರೈಲಿಂದ ಬಿದ್ದು ಅಪರಿಚಿತ ಯುವಕ-ಯುವತಿ ಸಾವು

Train rails
Published on

ವಿಜಯನಗರ: ಚಲಿಸುವ ರೈಲಿನಿಂದ ಅಪರಿಚಿತ ಯುವಕ- ಯುವತಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮದ ಬಳಿ ಶನಿವಾರ ಸಂಭವಿಸಿದೆ.

50 ಅಡಿ ಅಂತರದಲ್ಲಿ ಯುವತಿ ಮತ್ತು ಯುವಕನ ಶವಗಳು ರೈಲ್ವೆ ಹಳಿ ಪಕ್ಕದಲ್ಲೇ ಬಿದ್ದಿದ್ದು, ಮೃತರ ಹೆಸರು-ಬಗ್ಗೆ ವಿಳಾಸ ಇನ್ನೂ ಪತ್ತೆಯಾಗಿಲ್ಲ.

ಬಳ್ಳಾರಿಯಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ರೈಲು ಅಂತ ಹೇಳಲಾಗ್ತಿದೆ. ಚಲಿಸುವ ರೈಲಿನ ಡೋರ್​ನಲ್ಲಿ ಕುಳಿತಾಗ ಡೋರ್ ಬಡಿದು ಕೆಳಗೆ ಬಿದ್ದಿರಬಹುದು ಎಂಬ ಶಂಕೆ ವ್ಯಕ್ಯವಾಗಿದೆ. ಇವರಿಬ್ಬರ ಮೊಬೈಲ್ ಫೋನ್​ಗಳು ಸದ್ಯ ಆಫ್ ಆಗಿವೆ. ಸ್ಥಳಕ್ಕೆ ಬಳ್ಳಾರಿ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ವಯಸ್ಸು ಅಂದಾಜು 21 ವರ್ಷ ಇರಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net