More

    ದಯನೀಯ ಸ್ಥಿತಿಯಲ್ಲಿರುವ ಶಿವಮೊಗ್ಗದ ವಿಶ್ವನಾಥ ಶೆಟ್ಟಿ ತಾಯಿಗೆ ಪ್ರೇಜಾವರ ಶ್ರೀಗಳ ನೆರವು, ಪೊಳ್ಳು ಭರವಸೆ ವಿರುದ್ಧ ಆಕ್ರೋಶ

    ಶಿವಮೊಗ್ಗ: ಕೆಲವರ್ಷಗಳ ಹಿಂದೆ ಕೋಮು ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡ ಹಿಂದೂ ಕಾರ್ಯಕರ್ತ ವಿಶ್ವನಾಥ ಶೆಟ್ಟಿ ಮನೆಗೆ ಭೇಟಿ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು, ದಯನೀಯ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ವಿಶ್ವನಾಥನ ತಾಯಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

    ಮಾನವೀಯತೆ, ದಯೆ, ಅನುಕಂಪಗಳು ಪ್ರಚಾರಕ್ಕೆ ಎಂಬಂತಾಗಬಾರದು. ವಿಶ್ವನಾಥನ ಮರಣದ ಸಂದರ್ಭ ಭರವಸೆ ನೀಡಿದವರು ಒಂದಿಷ್ಟನ್ನು ಒದಗಿಸಿದ್ದರೂ ಇವತ್ತು ಈ ಹಿರಿಜೀವ ಇಷ್ಟು ಬವಣೆ ಪಡುವ ಅಗತ್ಯ ಇರಲಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ. ಇನ್ನಾದರೂ ಸಮಾಜ ಈ ಕುಟುಂಬಕ್ಕೂ ಒಂದಷ್ಟು ನೆರವಾಗಬೇಕು ಎಂದು ಶ್ರೀಗಳು ಮನವಿ ಮಾಡಿದರು. ಶ್ರೀಗಳು ವಿಶ್ವನಾಥನ ತಾಯಿ ಮೀನಾಕ್ಷಮ್ಮ ಅವರಿಗೆ 1 ಲಕ್ಷ ರೂ. ಸಾಂತ್ವನ ನಿಧಿ ನೀಡಿ ಫಲ ಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು.

    2015ರಲ್ಲಿ ಶಿವಮೊಗ್ಗದಲ್ಲಿ ಪಿಎಫ್​ಐ ಸಂಸ್ಥಾಪನಾ ಸಮಾವೇಶದ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಆಲ್ಕೊಳದ ವಿಶ್ವನಾಥ ಶೆಟ್ಟಿಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ ಹಿಂದೂಪರ ಸಂಘಟನೆಗಳು ಬೃಹತ್​ ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆ ವೇಳೆ ಅಬ್ಬರದ ಮಾತುಗಳಲ್ಲಿ ಅರಮನೆ ಕಟ್ಟಿದ್ದವರು ವಿಶ್ವನಾಥರ ಕುಟುಂಬದ ನೆರವಿಗೆ ಬಾರಲೇ ಇಲ್ಲ. ಅತ್ತ ಮಗನನ್ನು ಕಳೆದುಕೊಂಡ ತಾಯಿ, ಇತ್ತ ನೆರವೂ ಸಿಗದೇ ಅತ್ಯಂತ ದಯನೀಯ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ಹಸಿವು ನೀಗಿಸಿಕೊಳ್ಳಲು ಚಿಂದಿ ಹಾಯುವ ಕೆಸಲ ಮಾಡುತ್ತಿದ್ದಾರೆ.

    ಇತ್ತೀಚಿಗೆ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಮಥದ ವತಿಯಿಂದ 10 ಸಾವಿರ ರೂ. ನೆರವು ನೀಡಿದರು.

    ಭೀಕರ ಅಪಘಾತ, ಸ್ಥಳದಲ್ಲೇ ಐವರ ಸಾವು: ದತ್ತಾತ್ರೇಯನ ದರ್ಶನ ಪಡೆದು ವಾಪಸ್​ ಬರುವಾಗ ದುರಂತ

    ಮಗನ ಸಾವಿನ ಹಿಂದೆ ಸೊಸೆ ಕೈವಾಡ? ಅಂತ್ಯಸಂಸ್ಕಾರ ಆಗಿದ್ದ ಶವ ಹೊರತೆಗಿಸಿ ಮರಣೋತ್ತರ ಪರೀಕ್ಷೆ

    ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts