ಕೊಕ್ಕೋ ಕಟಾವಿನ ವೇಳೆ ಆಯತಪ್ಪಿ ಬಿದ್ದಿದ್ದ ಮಹಿಳೆ ಮೃತ್ಯು

saraswati
Published on

ಸುಳ್ಯ: ಕೊಕ್ಕೋ ಕೊಯ್ಯುತ್ತಿದ್ದಾಗ ಆಯತಪ್ಪಿ ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ನೆಲ್ಲೂರು ಕೆಮ್ರಾಜೆ ಗ್ರಾ.ಪಂ ಸದಸ್ಯ ವೇಣುಗೋಪಾಲ ತುಂಬೆತ್ತಡ್ಕ ಅವರ ತಾಯಿ ಸರಸ್ವತಿ(59) ಮೃತಪಟ್ಟವರು. ಸರಸ್ವತಿ ಸ್ಥಳೀಯವಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.

ಮೂರು ವಾರದ ಹಿಂದೆ ಕೆಲಸಕ್ಕೆ ಹೋಗಿ ಕೊಕ್ಕೋ ಕೊಯ್ಯುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದಿದ್ದರು. ಪರಿಣಾಮ ಅವರ ಬೆನ್ನುಹುರಿಗೆ ಗಂಭೀರ ಗಾಯವಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲದಿನಗಳಿಂದ ಚಿಕಿತ್ಸೆಗೆ ಸ್ಪಂದಿಸದೆ ಇದ್ದು ಗುರುವಾರ ಸರಸ್ವತಿ ಅವರನ್ನು ಮನೆಗೆ ಕರೆತರುವ ಸಂದರ್ಭ ದಾರಿಮಧ್ಯೆಕೊನೆಯುಸಿರೆಳೆದರು.ಅವರು ಪತಿ, ಪುತ್ರ, ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net