

Third Marriage : ಇತ್ತೀಚೆಗೆ ಭಾರತದಲ್ಲಿ ವಿವಾಹೇತರ ಸಂಬಂಧಗಳಿಗೆ ಸಂಬಂಧಿಸಿದ ಅನೇಕ ವಿಚಿತ್ರ ಘಟನೆಗಳು ಕಂಡುಬರುತ್ತಿವೆ. ತನ್ನ ಗಂಡನಿಗೆ ಅಕ್ರಮ ಸಂಬಂಧವಿದೆ ಎಂದು ತಿಳಿದ ನಂತರ ಅವನನ್ನು ಕತ್ತರಿಸಿ ಡ್ರಮ್‌ನಲ್ಲಿ ಹೂತುಹಾಕಿದ ಮಹಿಳೆ, ತನ್ನ ಮಗಳನ್ನು ಮದುವೆಯಾಗಲಿರುವ ವ್ಯಕ್ತಿಯೊಂದಿಗೆ ಓಡಿಹೋದ ಮತ್ತೊಬ್ಬ ಮಹಿಳೆ ಸೇರಿದಂತೆ ಹಲವಾರು ಘಟನೆಗಳು ಚರ್ಚೆಯ ವಿಷಯವಾಗಿದೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಮತ್ತೊಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 50ರ ಹರೆಯದ ಮಹಿಳೆಯೊಬ್ಬರು 30 ವರ್ಷದ ವ್ಯಕ್ತಿಯೊಂದಿಗೆ ಮನೆಯಿಂದ ಓಡಿಹೋದರು. ಯುವಕನ್ನು ಮದುವೆಯಾಗುವ ಮೂಲಕ ಆಕೆಗಿದು ಮೂರನೇ ಮದುವೆಯಂತೆ.
ಚಂದ್ರಶೇಖರ್ ಮತ್ತು ಇಂದ್ರಾವತಿ ಉತ್ತರ ಪ್ರದೇಶದ ದಂಪತಿಗಳಾಗಿದ್ದಾರೆ. ಅವರಿಬ್ಬರಿಗೆ ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಜೀವನ ಸಾಗಿಸಲು ಚಂದ್ರಶೇಖರ್ ಹಳ್ಳಿ-ಹಳ್ಳಿಗೆ ಕೆಲಸ ಮಾಡಲು ಹೋಗುತ್ತಿದ್ದಾನೆ. ಆದರೆ, ಒಂದು ತನ್ನ ಹೆಂಡತಿ ಇಂದ್ರಾವತಿ ಮನೆ ಬಿಟ್ಟು ಬೇರೆ ಯುವಕನ ಜತೆ ಪಾರಾಗಿಯಾಗಿದ್ದಾಳೆ ಎಂಬ ಮಾಹಿತಿ ಚಂದ್ರಶೇಖರ್ಗೆ ತಿಳಿದಿದೆ.
ನಮ್ಮ ಮನೆಯ ಸಮೀಪದ 30 ವರ್ಷದ ಅಜಾದ್ ಎಂಬ ವ್ಯಕ್ತಿಯೊಂದಿಗೆ ನನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಅಲ್ಲದೆ, ಇವರಿಬ್ಬರ ನಡುವೆ ಅಡ್ಡ ಬಂದ್ರ ಕೊಲ್ಲುವುದಾಗಿ ನನಗೆ ಬೆದರಿಕೆ ಹಾಕಿದ್ದಾರೆ. ನನ್ನನ್ನು ಕೊಲ್ಲಲು ವಿಫಲವಾದಾಗ ಅವಳು ಮೆನೆಯಿಂದ ಓಡಿಹೋಗಿ 30 ವರ್ಷದ ಅಜಾದ್ ಜತೆ ಮದುವೆಯಾಗಿದ್ದಾಳೆ ಎಂದು ಚಂದ್ರಶೇಖರ್ ಹೇಳಿದ್ದಾನೆ.
ಇದು ತನ್ನ ಪತ್ನಿಯ(ಇಂದ್ರಾವತಿ) ಮೂರನೇ ಮದುವೆ ಮತ್ತು ತಾನು ಆಕೆಯ ಎರಡನೇ ಗಂಡ ಎಂದು ಹೇಳಿದರು. ತನ್ನ ಮೊದಲ ಪತಿಯಿಂದ ಬೇರ್ಪಟ್ಟ ನಂತರ, ತಾನು ಮದುವೆಯಾಗಿರುವುದಾಗಿಯೂ, ಈಗಾಗಲೇ ಒಬ್ಬ ಮಗಳಿದ್ದಾಳೆಂದೂ ಅವಳು ಹೇಳಿದಳು. ಆಗಾ ನಾನು ಮದುವೆಯಾಗಿದ್ದೆ ಎಂದಿದ್ದಾರೆ.
ಇನ್ನು ಇಂದ್ರಾವತಿ ನನ್ನ ದೃಷ್ಟಿಯಲ್ಲಿ ಸತ್ತಿದ್ದಾರೆಂದು ಹೇಳಿದ ಚಂದ್ರಶೇಖರ್, ಆಕೆಯ ಮೊದಲ ಪತಿ ತನ್ನ ಮಗಳಿಗಾಗಿ ಅಡಮಾನ ಇಟ್ಟಿದ್ದ ಜಮೀನಿನ ಹಣವನ್ನು ಮರುಪಾವತಿಸಬೇಕೆಂದು ಹೇಳಿಕೊಂಡಿದ್ದಾನೆ. ಈ ವಿಷಯದಲ್ಲಿ ಪೊಲೀಸರಿಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.(ಏಜೆನ್ಸೀಸ್)