ಬೈಕ್​ ಮೇಲಿದ್ದ ಹೆಲ್ಮೆಟ್​ ನುಂಗಿದ ಆನೆ! ಪಾಪ ಹಸಿವಾಗಿತ್ತೇನೋ... ಸಖತ್​ ವೈರಲ್​ ಆಗ್ತಿದೆ ಈ ವಿಡಿಯೋ

elephant eats helmet
Published on

ಅಸ್ಸಾಂ: ಇಲ್ಲೊಂದು ಆನೆ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ ಬಳಿ ಬಂದು ಅಲ್ಲಿದ್ದ ಹೆಲ್ಮೆಟ್​ ಅನ್ನು ನುಂಗಿ ತನಗೇನೂ ಗೊತ್ತಿಲ್ಲವೆಂಬಂತೆ ಹೋಗಿದ್ದು, ಈ ವಿಡಿಯೋ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಅಸ್ಸಾಂನ ಗುವಾಹಟಿಯ ಸತ್‌ಗಾಂವ್ ಸೇನಾ ಶಿಬಿರದ ಬಳಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಬೈಕ್‌ ನಿಲ್ಲಿಸಿ ಬೈಕ್​ನ ಮಿರರ್​ ಬಳಿ ಹೆಲ್ಮೆಟ್​ ಇಟ್ಟಿದ್ದರು. ಆ ಮಾರ್ಗವಾಗಿ ಸಂಚರಿಸುತ್ತಾ ಬಂದ ಆನೆಯೊಂದು ಬೈಕ್​ ಬಳಿ ಬಂದು ಅಲ್ಲಿದ್ದ ಹೆಲ್ಮೆಟ್​ ಅನ್ನು ಸೊಂಡಿಲಿಂದ ತೆಗೆದುಕೊಂಡು ನುಂಗಿಬಿಟ್ಟಿದೆ. ಆ ಮೇಲೆ ತನಗೇನೂ ಗೊತ್ತಿಲ್ಲ ಎಂಬಂತೆ ಮುಂದೆ ಸಾಗಿದೆ. ಇದನ್ನೂ ಓದಿರಿ ಯಾರಿಗೂ ತಿಳಿಯದಂತೆ ಪ್ರೇಯಸಿಯನ್ನ ಮನೆಯಲ್ಲೇ 10 ವರ್ಷ ಅಡಗಿಸಿಟ್ಟಿದ್ದ ಪ್ರಿಯಕರ! ಆ ಕೋಣೆಯ ರಹಸ್ಯ ಬಯಲಾಗಿದ್ದೇ ರೋಚಕ

ಬೈಕ್​ ಸಮೀಪದಲ್ಲೇ ಇದ್ದವರು ಆನೆ ಹೆಲ್ಮೆಟ್​ ಅನ್ನು ಕಾಲಿನಡಿ ಹಾಕಿ ತುಳಿಯುತ್ತೆ ಎಂದುಕೊಂಡಿದ್ದರಂತೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, 'ಪಾಪ ಆನೆಗೆ ಹಸಿವಾಗಿತ್ತೇನೋ..' ಎಂದು ನೆಟ್ಟಿಗರು ಕಮೆಂಟ್​ ಕೊಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net