

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆ ವೈದ್ಯರೊಬ್ಬರು ಅಪಾರ್ಟ್ಮೆಂಟ್ನ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ.
ಡಾ. ಪೃಥ್ವಿರಾಜ್ ರೆಡ್ಡಿ(31) ಆತ್ಮಹತ್ಯೆ ಮಾಡಿಕೊಂಡ ವೈದ್ಯ. ಮೂರು ತಿಂಗಳ ಹಿಂದಷ್ಟೇ ಇವರು ವೈದ್ಯೆಯೊಬ್ಬರ ಜೊತೆ ಮದುವೆ ಆಗಿದ್ದರು. ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋದ್ರೇಜ್ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದರು.
ಬುಧವಾರ ಬೆಳಗಿನ ಜಾವ ಅಪಾರ್ಟ್ಮೆಂಟ್ನ 11ನೇ ಮಹಡಿ ಮೇಲಿನಿಂದ ಕೆಳಕ್ಕೆ ಜಿಗಿದು ಡಾ. ಪೃಥ್ವಿರಾಜ್ ರೆಡ್ಡಿ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ಏನೆಂದು ಗೊತ್ತಾಗಿಲ್ಲ. ವೈದ್ಯನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಂಧ್ರದಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಪೊಲೀಸರು ತನಿಖೆ ಮುಂದುರಿಸಿದ್ದಾರೆ.
ಡಾ. ಪೃಥ್ವಿರಾಜ್ ಕೂಡ ವೈದ್ಯರು. ಪತ್ನಿಯೂ ವೈದ್ಯೆ. ಸುಖವಾಗಿ ಸಂಸಾರ ಮಾಡಬೇಕಿದ್ದವ ಸಾವಿನ ಮನೆಯ ಕದ ತಟ್ಟಿದ್ದೇಕೆ? ಎಂಬುದು ಪೊಲೀಸರ ತನಿಖೆ ಬಳಿಕವಷ್ಟೇ ಗೊತ್ತಾಗಲಿದೆ.