ಉತ್ತರ ಪ್ರದೇಶದಲ್ಲಿ ಫಲಿಸಲಿಲ್ಲ ಪ್ರಿಯಾಂಕಾ ಗಾಂಧಿ ತಂತ್ರಗಾರಿಕೆ, ಯೋಗಿ ಹವಾ ಮುಂದೆ ನೆಲಕ್ಕಚ್ಚಿದ ಕಾಂಗ್ರೆಸ್​

priyanaka gandhi
Published on

ಲಕ್ನೊ: ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದ್ದು, ಯೋಗಿ ಆದಿತ್ಯನಾಥ್​ರ ದರ್ಬಾರ್​ ಮುಂದುವರಿಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಭಾರೀ ಮುಖಭಂಗವಾಗಿದ್ದು, ಸ್ಥಳೀಯ ನಾಯಕತ್ವ ಅಷ್ಟೇ ಅಲ್ಲ, ಹೈಕಮಾಂಡ್ ನಾಯಕತ್ವ ಕೆಲಸ ಫಲಿಸಿಲ್ಲ. ಪ್ರಿಯಾಂಕಾ ಗಾಂಧಿ ಅವರ ತಂತ್ರಗಾರಿಕೆಯೂ ಠುಸ್​ ಆಗಿದೆ.

ಪ್ರಿಯಾಂಕಾ ಗಾಂಧಿ ಹೋದ ಕಡೆ ಜನ ಸಾಗರ ಸೇರುತ್ತಿತ್ತು. ಉತ್ತರ ಪ್ರದೇಶಲ್ಲಿ ಭರ್ಜರಿ ಪ್ರಚಾರ ಮಾಡಿದ್ರೂ ಮತದಾರರು ಮಾತ್ರ ಕಾಂಗ್ರೆಸ್​ ಅಭ್ಯರ್ಥಿಗಳಿಗೆ ಮನ್ನಣೆ ನೀಡಿಲಿಲ್ಲ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಷ್ಟೇ ಕಾಂಗ್ರೆಸ್​ಗೆ​ ಗೆಲುವಾಗಲಿದೆ. ಈಗಾಗಲೇ 250 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 2ನೇ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷಕ್ಕೆ 125 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

Koo App
BJP rewrites HISTORY! I bow to the people of Uttar Pradesh for blessing the BJP4India with a historic VICTORY and reaffirming faith in the MODI-YOGI government. #BJPWinningUP
View attached media content
-Shobha Karandlaje (@shobhabjp)10 Mar 2022
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net