ಪಂಜಾಬ್​ ಸಿಎಂ ಚನ್ನಿ ಸ್ಪರ್ಧಿಸಿದ್ದ 2 ಕ್ಷೇತ್ರದಲ್ಲೂ ಹಿನ್ನಡೆ

panjab cm chinni
Published on

ಚಂಡಿಘಡ: ಪಂಜಾಬ್​ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಸಿಎಂ ಚರಣ​ಜಿತ್​ ಸಿಂಗ್​ ಚನ್ನಿ ಸ್ಪರ್ಧಿಸಿದ್ದ 2 ಕ್ಷೇತ್ರದಲ್ಲೂ ಆರಂಭಿಕ ಹಿನ್ನಡೆ ಕಂಡಿದ್ದಾರೆ.

ಆಮ್​ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದ್ದು, ಪಂಜಾಬ್‌ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ಭರದಿಂದ ಸಾಗಿದೆ.

ಮಧ್ಯಾಹ್ನದ ವೇಳೆಗೆ ಚುನಾವಣೆಯ ಸ್ಪಷ್ಟ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ಪಂಜಾಬ್​ನ ಘಟಾನುಘಟಿಗಳಿಗೆ ಮತ ಎಣಿಕೆ ಆರಂಭದಲ್ಲೇ ಆಪ್​ ಬಿಗ್​ ಶಾಕ್​ ಕೊಟ್ಟಿದೆ. ಮೂರನೇ ಸ್ಥಾನದಲ್ಲಿ ಬಿಜೆಪಿ ಇದೆ. ಚಮ್ಕೌರ್ ಸಾಹಿಬ್‌ ಕ್ಷೇತ್ರದಲ್ಲೂ ಪಂಜಾಬ್ ಸಿಎಂ ಚನ್ನಿಯ ಅದೃಷ್ಟ ಪರೀಕ್ಷೆ ಹಾವು ಏಣಿಯಂತಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಿ ಈ ಕ್ಷೇತ್ರದಲ್ಲಿ ಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net