ಕೆಲಸದ ಮೊದಲ ದಿನವೇ ಆದಿವಾಸಿ ಕಾರ್ಮಿಕನಿಗೆ ಒಲಿದ 40 ಲಕ್ಷ ಮೌಲ್ಯದ ವಜ್ರ..! Diamond

Diamond
Published on

Diamond: ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಗಣಿಯೊಂದರಲ್ಲಿ ಬುಡಕಟ್ಟು ಕಾರ್ಮಿಕನೊಬ್ಬ 40 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಪತ್ತೆ ಮಾಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಷ್ಣ ಕಲ್ಯಾಣಪುರ ಪಟ್ಟಿಯಲ್ಲಿರುವ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಾಧವ್‌ಗೆ 11.95 ಕ್ಯಾರೆಟ್ ಬೆಲೆಬಾಳುವ ಕಲ್ಲೊಂದು ಸಿಕ್ಕಿದೆ. ಅದು ಆ ಕಾಮಿಕನ ಜೀವನವನ್ನೇ ಬದಲಾಯಿಸಿದೆ.

ಪನ್ನಾ ವಜ್ರ ಕಚೇರಿಯ ಅಧಿಕಾರಿ ರವಿ ಪಟೇಲ್, ವಜ್ರವು ಅತ್ಯುತ್ತಮ ಸ್ಪಷ್ಟತೆಯನ್ನು ಹೊಂದಿದೆ ಮತ್ತು ಇದರ ಮೌಲ್ಯ 40 ಲಕ್ಷ ರೂ. ನಿಯಮಗಳ ಪ್ರಕಾರ, ಮಾಧವ್ ವಜ್ರವನ್ನು ಜಿಲ್ಲಾ ವಜ್ರ ಕಚೇರಿಗೆ ಸಲ್ಲಿಸಿದ್ದಾರೆ. ಕಲ್ಲನ್ನು ಶೀಘ್ರದಲ್ಲೇ ಹರಾಜು ಹಾಕಲಾಗುವುದು ಮತ್ತು 12.5% ರಾಯಲ್ಟಿ ಕಡಿತದ ನಂತರ, ಮಾಧವ್ ಉಳಿದ ಆದಾಯವನ್ನು ಪಡೆಯುತ್ತಾರೆ ಎಂದು ಪನ್ನಾ ವಜ್ರ ಕಚೇರಿಯ ಅಧಿಕಾರಿ ರವಿ ಪಟೇಲ್ ತಿಳಿಸಿದ್ದಾರೆ.

ಬುಂದೇಲ್ಖಂಡ್ ಪ್ರದೇಶದಲ್ಲಿರುವ ಪನ್ನಾ ತನ್ನ ಶ್ರೀಮಂತ ವಜ್ರದ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ, ಇದು ಸುಮಾರು 12 ಲಕ್ಷ ಕ್ಯಾರೆಟ್ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net