

ನವದೆಹಲಿ: ಅನುಮಾನಾಸ್ಪದ ಬುತ್ತಿಯೊಂದು ಪತ್ತೆಯಾಗಿದ್ದು, ಅದರಲ್ಲಿ ಸ್ಫೋಟಕ ವಸ್ತು ಇರುವ ಶಂಕೆ ಕೂಡ ಮೂಡಿರುವುದರಿಂದ, ಸುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಜಮ್ಮು-ಕಾಶ್ಮೀರ ಪ್ರದೇಶದಲ್ಲಿ ಈ ಪ್ರಕರಣ ನಡೆದಿದೆ.
ಜಮ್ಮು-ಕಾಶ್ಮೀರದ ನಾರಿಯನ್ ಬಳಿಯ ರಾಷ್ಟ್ರೀಯ ಹೆದ್ದಾರಿ 144ಎನಲ್ಲಿ ಈ ಅನುಮಾನಾಸ್ಪದ ಟಿಫನ್ ಬಾಕ್ಸ್ ಕಂಡುಬಂದಿದೆ. ಅದರಲ್ಲಿ ಸ್ಫೋಟಕ ವಸ್ತು ಇರಬಹುದು ಎಂಬ ಸಂದೇಹ ಮೂಡಿದ್ದು, ಸೇನಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ.
ಸಮೀಪದ ಆರ್ಮಿ ಕ್ಯಾಂಪ್ನಿಂದ ತಂಡಗಳು ಸ್ಥಳಕ್ಕೆ ಬಂದಿದ್ದು, ಹತ್ತಿರದ ಕಲ್ಲರ್ ಮತ್ತು ಬಲವೆನ್ಯೂ ಚೆಕ್ಪೋಸ್ಟ್ಗಳಲ್ಲಿ ವಾಹನಗಳನ್ನು ತಪಾಸಣೆಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಮತ್ತೊಂದೆಡೆ ತನಿಖೆ ನಡೆಸುವಂತೆ ಪೊಲೀಸರಿಗೂ ತಿಳಿಸಲಾಗಿದೆ. ಅಲ್ಲದೆ, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕಳುಹಿಸಲಾಗಿದೆ ಎಂದು ಸೇನೆಯ ಮಾಧ್ಯಮ ಮೂಲಗಳು ತಿಳಿಸಿವೆ.