More

    ಪುರುಷ ಗ್ರಾಹಕರಿಗಾಗಿ ಗಂಗೂಬಾಯಿ ಚಿತ್ರದ ಈ ದೃಶ್ಯ ಬಳಸಿ ವಿವಾದದಲ್ಲಿ ಸಿಲುಕಿದ ಪಾಕ್​ನ ಈ ಹೋಟೆಲ್​!

    ಇಸ್ಲಮಾಬಾದ್​: ಗ್ರಾಹಕರನ್ನು ಸೆಳೆಯಲು ಪಾಕಿಸ್ತಾನದ ಹೋಟೆಲ್​ವೊಂದು ಮಾಡಿರುವ ಯೋಜನೆ ನೋಡಿದರೆ ನಿಜಕ್ಕೂ ನೀವು ಬೆರಗಾಗ್ತೀರಾ. ಅದರಲ್ಲೂ ಪುರುಷ ಗ್ರಾಹಕರೇ ಹೆಚ್ಚಾಗಿ ಬರಬೇಕೆಂದು ಚಿತ್ರದಲ್ಲಿ ಆಲಿಯಾ ಭಟ್​ ನಟಿಸಿರುವ ದೃಶ್ಯವೊಂದನ್ನು ಬಳಸಿಕೊಂಡಿದ್ದಾರೆ.

    ಇದೇ ವರ್ಷದಲ್ಲಿ ತೆರೆಕಂಡ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾದಲ್ಲಿ ಆಲಿಯಾ ಭಟ್​​​ ಚಿತ್ರವನ್ನು ಹೋಟೆಲ್​ ಮುಂದೆ ಅಂಟಿಸಿ, ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಹೋಟೆಲ್​ ವಿರುದ್ಧ ನೆಟ್ಟಿಗರು ಕಿಡಿ ಕಾರಿದ್ದಾರೆ.

    ಪುರುಷ ಗ್ರಾಹಕರಿಗಾಗಿ ಗಂಗೂಬಾಯಿ ಚಿತ್ರದ ಈ ದೃಶ್ಯ ಬಳಸಿ ವಿವಾದದಲ್ಲಿ ಸಿಲುಕಿದ ಪಾಕ್​ನ ಈ ಹೋಟೆಲ್​!

    ಮುಂಬೈನ ಕಾಮಾಟಿಪುರದ ಗಂಗೂಬಾಯಿ ಕಾಥಿಯಾವಾಡಿ ಅವರು ಜೀವನಾಧಾರಿತ ಚಿತ್ರದಲ್ಲಿ ಆಲಿಯಾ ಭಟ್​ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಕರಾಚಿಯ ಈ ರೆಸ್ಟೋರೆಂಟ್​​ ಆಲಿಯಾ ಭಟ್​ ಅವರ ದೃಶ್ಯವೊಂದನ್ನು ಬಳಸಿರುವುದಲ್ಲದೇ ಹೋಟೆಲ್​ ಮುಂದೆ ಪೋಸ್ಟರ್ ಸಹ ಅಂಟಿಸಿದ್ದಾರಂತೆ. ಅಲ್ಲದೇ ಪುರುಷರಿಗೆ ಶೇ.25ರಷ್ಟು ರಿಯಾಯಿತಿ ಕೂಡ ಇದೆ ಎಂದು ಈ ಹೋಟೆಲ್​ ಹೇಳಿಕೊಂಡಿದೆ.

    ಚಿತ್ರದಲ್ಲಿ ಪುರುಷರನ್ನು ಕರೆಯುವ ದೃಶ್ಯವನ್ನೇ ಇಲ್ಲಿ ಬಳಕೆ ಮಾಡಿಕೊಂಡಾಗಿನಿಂದ ಗ್ರಾಹಕರು ಹೆಚ್ಚಾಗಿದೆ ಎಂದೂ ಸಹ ಹೋಟೆಲ್​​​ ಸಿಬ್ಬಂದಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ತಮ್ಮ ಮಗನ ಹೆಸರು ಬಹಿರಂಗಪಡಿಸಿದ ಯುವರಾಜ್​​ ಸಿಂಗ್​​ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts