ತಮ್ಮ ಮಗನ ಹೆಸರು ಬಹಿರಂಗಪಡಿಸಿದ ಯುವರಾಜ್​​ ಸಿಂಗ್​​ ದಂಪತಿ!

Yuvrajsingh
Published on

ಮುಂಬೈ: ಅಪ್ಪನ ದಿನಾಚರಣೆಯಂದೇ ತಮ್ಮ ಮಗನ ಹೆಸರನ್ನು ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​ ಬಹಿರಂಗಪಡಿಸಿದ್ದಾರೆ. ಜನವರಿಯಲ್ಲಿ ತಮ್ಮ ಮಗುವನ್ನು ಬರಮಾಡಿಕೊಂಡಿದ್ದ ಯುವರಾಜ್​ ಸಿಂಗ್​ ಹಾಗೂ ಹೇಜಲ್ ಕೀಚ್​​​ ದಂಪತಿ ಇದೇ ಮೊದಲ ಬಾರಿಗೆ ಮಗುವಿನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ತನ್ನ ಪತ್ನಿ ಹಾಗೂ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿರುವ ಯುವರಾಜ್​ ಸಿಂಗ್​ ತಮ್ಮ ಮಗನ ಹೆಸರು ಓರಿಯನ್​ ಕೀಚ್​ ಸಿಂಗ್​ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.ಈ ಹೆಸರು ಸ್ವಲ್ವ ವಿಭಿನ್ನ ಎನಿಸಿದರೂ, ಓರಿಯನ್​ ಎಂಬ ಪದ ಗ್ರೀಕ್​ ಭಾಷೆಯದ್ದಾಗಿದ್ದು, ಬೇಟೆಗಾರ ಹಾಗೂ ನಕ್ಷತ್ರಪುಂಜ ಎಂಬರ್ಥವನ್ನು ನೀಡುತ್ತದೆ ಎಂದು ಅದರ ವಿವರವನ್ನೂ ಯುವರಾಜ್​ ಸಿಂಗ್​ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಚಿತ್ರಕ್ಕೆ ಬಾಲಿವುಡ್​​ ನಟರಾದ ಆಯುಷ್ಮಾನ್​ ಖುರಾನಾ, ಬಿಪಾಶಾ ಬಸು, ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​ ಶುಭಕೋರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net