'ಅಮ್ಮ ಎದ್ದೇಳಮ್ಮ.. ಅಪ್ಪ ನೇಣು ಹಾಕಿಕೊಂಡಿದ್ದಾರೆ...' ಮಗಳ ಚೀರಾಟ ಕೇಳಿ ನಿದ್ರೆಯಿಂದ ಎದ್ದವರಿಗೆ ಕಾದಿತ್ತು ಶಾಕ್​!

police asi sucide
Published on

ಕಲಬುರಗಿ: ಪೊಲೀಸ್ ಕ್ವಾಟ್ರಸ್​ನಲ್ಲೇ ಪೊಲೀಸ್​ ಅಧಿಕಾರಿಯೊಬ್ಬರು ನೇಣುಬಿಗಿದುಕೊಂದ ಮೃತಪಟ್ಟ ಪ್ರಕರಣ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಜಗನ್ನಾಥ್ ಮುತ್ತಂಗಿ (54) ಮೃತರು. ರಿಸರ್ವ್​ ಪೊಲೀಸ್​ ವಿಭಾಗದಲ್ಲಿ ಎಎಸ್​ಐ ಆಗಿದ್ದ ಜಗನ್ನಾಥ್​ ಮೂಲತಃ ಕಮಲಾನಗರ ತಾಲೂಕಿನ ಬಾಚನಾಳ ಗ್ರಾಮದವರು. ಪತ್ನಿ ಮತ್ತು ಮಕ್ಕಳೊಂದಿಗೆ ಕಲಬುರಗಿಯ ಪೊಲೀಸ್​ ಕ್ವಾಟ್ರಸ್​ನಲ್ಲಿ ವಾಸವಿದ್ದರು.

ಇಂದು ಬೆಳಗ್ಗೆ ನನ್ನ ಹಿರಿಯ ಮಗಳು ಕಾಲೇಜಿಗೆ ಹೋಗಲು ಬೇಗ ಎದ್ದಿದ್ದಳು. ನಾವಿನ್ನೂ ಮಲಗಿಯೇ ಇದ್ದೆವು. ಆಗ 'ಅಮ್ಮ... ಎದ್ದೇಳಮ್ಮ... ಅಪ್ಪ ನೇಣು ಹಾಕಿಕೊಂಡಿದ್ದಾರೆ' ಎಂದು ಮಗಳು ಚೀರಾಡುತ್ತಿದ್ದಂತೆ ಎದ್ದು ನೋಡಿದ್ರೆ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡು ಸತ್ತಿರುವ ದೃಶ್ಯ ಕಂಡಿತು. ಅವರಿಗೆ ಅನಾರೋಗ್ಯ ಕಾಡುತ್ತಿದ್ದರಿಂದ ಒಂದೂವರೆ ತಿಂಗಳಿಂದ ವೈದ್ಯರ ಸಲಹೆ ಮೇರೆಗೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು. ಜಿಗುಪ್ಸೆಗೊಂಡು ಸಾವಿನ ಮನೆಯ ಕದ ತಟ್ಟಿದ್ದಾರೆ ಎಂದು ಮೃತರ ಪತ್ನಿ ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net