VIDEO| ಉತ್ತರಕನ್ನಡದಲ್ಲಿ ಪ್ರವಾಹ: ನೋಡ ನೋಡುತ್ತಿದ್ದಂತೆ ಕುಸಿಯುತ್ತಿವೆ ಮನೆಗಳು...

1141710
Published on

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದಾಗಿ ಸಾಕಷ್ಟು ಅನಾಹುತ ಸೃಷ್ಟಿಯಾಗಿದೆ. ಅಂಕೋಲಾದಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಹಿಚ್ಕಡ ಮತ್ತು ಹೊನ್ನಳ್ಳಿ ಗ್ರಾಮದಲ್ಲಿ ನೋಡನೋಡುತ್ತಿದ್ದಂತೆ ಮನೆಗಳು ಕುಸಿಯುತ್ತಿರುವ ಆಘಾತಕಾರಿ ದೃಶ್ಯ ವೈರಲ್ ಆಗಿದೆ.

ಹಿಚ್ಕಡದಲ್ಲಿ ಎರಡು ಅಂತಸ್ತಿನ ಹಳೇಯ ಮನೆ, ಹೊನ್ನಳ್ಳಿ ಗ್ರಾಮದಲ್ಲಿ ಮತ್ತೊಂದು ಮನೆ ಕುಸಿಯುತ್ತಿರುವ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನಿಸುತ್ತೆ.

ಧಾರಾಕಾರ ಮಳೆಯಿಂದಾಗಿ ಅಂಕೋಲಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿಯುತ್ತಿದ್ದು, ಸುತ್ತಮುತ್ತಲ ಪ್ರದೇಶ ಜಲಾವೃತಗೊಂಡಿದೆ. ಕ್ಷಣಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚುತ್ತಲೇ ಇದ್ದು, ಆತಂಕ ಮಡುಗಟ್ಟಿದೆ.

ಅಂಕೊಲಾ ತಾಲೂಕಿನ ಶಿರೂರು, ಬೆಳ್ಸೆ ಕೂರ್ವೆ, ಕೊಡ್ಸಣಿ ಸೇರಿದಂತೆ ಹಲವು 7 ಗ್ರಾಮಗಳು ಸಂಪೂರ್ಣ ಮುಳುಗಡೆ‌ಯಾಗಿವೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇತ್ತ ಕಾಳಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಶುಕ್ರವಾರ ಬೆಳಗ್ಗೆ ಶಿರೂರಿನಲ್ಲಿ ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಮಗುಚಿ ಗ್ರಾಮದ ಮಹಿಳೆ ಬೀರುಮಾರುಗೌಡ(67) ಹಾಗೂ ಗಂಗಾಧರ ದೇವುಗೌಡ(33) ನಾಪತ್ತೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net