

ಮೈಸೂರು: ದೆಹಲಿಯಲ್ಲಿ ಬುಧವಾರ(ಜ.26) ನಡೆಯಲಿರುವ 73ನೇ ಗಣರಾಜ್ಯೋತ್ಸವ ಆಚರಣೆ ವೇಳೆ ಪರೇಡ್ನಲ್ಲಿ ಮೈಸೂರಿನಲ್ಲಿ ಚಹಾ ಮಾರುವವರ ಮಗಳು, ಬಿಎಸ್ಸಿ ವಿದ್ಯಾರ್ಥಿನಿಗೆ ಎನ್ಸಿಸಿ ನೇತೃತ್ವ ವಹಿಸುವ ಜವಾಬ್ದಾರಿ ಒಲಿದಿದೆ.
ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುವರ್ ಎನ್ಸಿಸಿ ತಂಡದ ನೇತೃತ್ವ ವಹಿಸಿದ್ದಾರೆ. ಪ್ರಮೀಳಾ ಕುವರ್ ಮೈಸೂರಿನ ವಿವಿ ಮೊಹಲ್ಲಾದ ನಿವಾಸಿ. ಎನ್ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಪ್ರಮೀಳಾ ಅವರು ಪ್ರತಾಪ್ ಸಿಂಗ್ ಪುಷ್ಪಾಕುವರ್ ಅವರ ಪುತ್ರಿ.
ಅಂದಹಾಗೆ, ಪ್ರತಾಪ್ ಸಿಂಗ್ ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. 2018ರ ದಸರಾ ಮೆರವಣಿಗೆಯಲ್ಲೂ ಪ್ರಮೀಳಾ ಎನ್ಸಿಸಿ ತಂಡದ ನೇತೃತ್ವ ವಹಿಸಿದ್ದರು.