2 ತಿಂಗಳಲ್ಲಿ ಕರಾವಳಿಯಲ್ಲಿ ದಾಖಲೆ 2,713 ಮಿಮೀ ಮಳೆ

rain

ಬೆಂಗಳೂರು: ರಾಜ್ಯದಲ್ಲೆಡೆ ವರುಣಾರ್ಭಟ ಮುಂದುವರಿದಿರುವ ಬೆನ್ನಲ್ಲೇ ಎರಡು ತಿಂಗಳಲ್ಲಿ ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕಗಿಂತ ಕರಾವಳಿ ಜಿಲ್ಲೆಗಳಲ್ಲಿ ದಾಖಲೆ ಮಟ್ಟದಲ್ಲಿ ಮಳೆಯಾಗಿದೆ.

ಜೂ 1ರಿಂದ ಆ.2ರವರೆಗೆ ಕರಾವಳಿ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ವಾಡಿಕೆಯಂತೆ 2,046 ಮಿಮೀ ಮಳೆಯಾಗಬೇಕಿತ್ತು. ಆದರೆ, 2,713 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.33ರಷ್ಟು ಅಧಿಕ ವರ್ಷಧಾರೆಯಾಗಿದೆ. ಮಲೆನಾಡು ವ್ಯಾಪ್ತಿಯ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗಿನಲ್ಲಿ 993 ಮಿಮೀ ಮಳೆ ಬದಲಾಗಿ 1,295 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.30ರಷ್ಟು ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 151 ಮಿಮೀ ಮಳೆ ಬೀಳುವ ಬದಲು 215 ಮಿಮೀ ಸುರಿದಿದ್ದು, ಶೇ.43ರಷ್ಟು ಹೆಚ್ಚಿನ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಾಡಿಕೆಯಂತೆ 228 ಮಿಮೀ ಮಳೆಯಾಗಬೇಕಿತ್ತು. ಆದರೆ, 293 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.28 ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ. 4 ವರ್ಷದ ಬಳಿಕ ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

ಜೂ 1ರಿಂದ ಆ.2ರವರೆಗೆ ರಾಜ್ಯದ ಯಾವುದೇ ಜಿಲ್ಲೆಗಳು ಮಳೆ ಕೊರತೆ ಅನುಭವಿಸಿಲ್ಲ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ,ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂ. ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು, ಮಂಡ್ಯ, ಬಳ್ಳಾರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿ 22 ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿದೆ. 9 ಜಿಲ್ಲೆಗಳಲ್ಲಿ ವಾಡಿಕೆಯಷ್ಟೇ ಸುರಿದಿದೆ.

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಒಡೆತನದ ಬೇಕರಿ ನೆಲಸಮ; ಸಿಎಂ ಯೋಗಿ ಸರ್ಕಾರದಿಂದ ಬುಲ್ಡೋಜರ್​ ಕ್ರಮ

ಈ ಬಾರಿ ಮಳೆ ದಿನ ಅವಧಿ ಬದಲಾಗಿಲ್ಲ
ಐದು ವರ್ಷಗಳಿಂದ ಮಳೆ ಅವಧಿ ದಿನಗಳು ಬದಲಾಗುತ್ತಿತ್ತು. ಜೂನ್​ನಲ್ಲಿ ಬೀಳುವ ಮಳೆ ಜುಲೈನಲ್ಲಿ, ಜುಲೈನಲ್ಲಿ ಬೀಳುವ ಮಳೆ ಆಗಸ್ಟ್​ನಲ್ಲಿ, ಆಗಸ್ಟ್​ನಲ್ಲಿ ಬೀಳುವ ಮಳೆ ಸೆಪ್ಟೆಂಬರ್​ನಲ್ಲಿ ಸುರಿಯುತ್ತಿತ್ತು. ಸತತ 5 ವರ್ಷಗಳಿಂದ ಜೂನ್​,ಜುಲೈನಲ್ಲಿ ಮಳೆ ಕುಂಠಿತವಾಗುತ್ತಿತ್ತು. ಆರಂಭದಲ್ಲೇ ಮುಂಗಾರು ಕೈಕೊಟ್ಟ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿ ಆಹಾರ ಉತ್ಪಾದನೆ ಕುಸಿತವಾಗುತ್ತಿತ್ತು. ಆದರೆ, ಈ ಬಾರಿ ಮಳೆ ದಿನಗಳ ಅವಧಿ ಬದಲಾಗಿಲ್ಲ. ಜೂನ್​,ಜುಲೈನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವುದು ಗಮನಾರ್ಹ.

ತಿಂಗಳವಾರು ಮಳೆ ವಿವರ:
ಪ್ರದೇಶ            ಜೂನ್​                      ಜುಲೈ(ಮಿಮೀಗಳಲ್ಲಿ)
ಕರಾವಳಿ            699                            1,817
ಮಲೆನಾಡು         258                             985
ಉತ್ತರ ಕರ್ನಾಟಕ  145                            142
ದಕ್ಷಿಣ  ಕರ್ನಾಟಕ  113                              100

ಅರಬ್ಬಿ ಸಮುದ್ರ ಪೂರ್ವ ಭಾಗದಲ್ಲಿ ತೇವಾಂಶ ಭರಿತ ಮೋಡಗಳು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ,ಮೇಲ್ಮೆ ಸುಳಿಗಾಳಿ ದೀರ್ವಾಗಿ ಇದ್ದಿರುವ ಕಾರಣದಿಂದಾಗಿ ಜೂನ್​ ಮತ್ತು ಜುಲೈನಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಯಿತು. ಪ್ರಸ್ತುತ ಹವಮಾನ ಸ್ಥಿತಿ ಗಮನಿಸಿದರೆ ಈ ತಿಂಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ.
| ಸಿ.ಎಸ್​.ಪಾಟೀಲ್​. ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ.

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…