ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್​ಡಿಕೆ? ಸಿದ್ದರಾಮಯ್ಯ-ರಮೇಶ್​ಕುಮಾರ್​ಗೆ ಅಭಿನಂದಿಸಿದ್ದೇಕೆ?

HDK 18 Feb 20
Published on

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ರಾಜ್ಯಸಭೆ ಚುನಾವಣೆ ಕ್ಲೈಮಾಕ್ಸ್​ ಹಂತಕ್ಕೆ ತಲುಪಿದೆ. ಇನ್ನು ಕೆಲವೇ ಕ್ಷಣದಲ್ಲಿ ಗೆಲುವಿನ ಮಅಲೆ ಯಾರಿಗೆ ಎಂಬ ಕುತೂಹಲಕ್ಕೆ ತೆರಬೀಳಲಿದೆ. ಆದರೆ, ಮತದಾನ ಮಾಡಲೆಂದು ಜೆಡಿಎಸ್​ ಶಾಸಕರೊಂದಿಗೆ ಆಗಮಿಸಿದ ಎಚ್​.ಡಿ.ಕುಮಾರಸ್ವಾಮಿ ವಿಧಾನಸೌಧದಲ್ಲಿ ಆಡಿದ ಆ ಒಂದು ಮಾತು 'ಮತದಾನಕ್ಕೂ ಮುನ್ನವೇ ಸೋಲು ಒಪ್ಪಿಕೊಂಡ್ರಾ ಎಚ್​ಡಿಕೆ? ಕುಪೇಂದ್ರ ರೆಡ್ಡಿಗೆ ಸೋಲು ಖಚಿತವಾಯ್ತೆ?, ಕಾಂಗ್ರೆಸ್​-ಜೆಡಿಎಸ್​ ನಡುವಿನ ಕದನದಲ್ಲಿ ಬಿಜೆಪಿಗೆ ಲಾಭವಾಯ್ತೆ?' ಎಂಬ ಪ್ರಶ್ನೆಗಳು ಮೂಡಿವೆ.

'ಬಿಜೆಪಿ ಗೆಲುವಿಗೆ ಕಾರಣವಾದ ಸಿದ್ದರಾಮಯ್ಯ ಮತ್ತು ರಮೇಶ್​ಕುಮಾರ್​ ಅವರನ್ನು ನಾನು ಅಭಿನಂದಿಸುತ್ತೇನೆ. ಯಾಕಂದ್ರೆ 4ನೇ ಸ್ಥಾನಕ್ಕೆ ಬಿಜೆಪಿ ಗೆದ್ದರೆ ಅದಕ್ಕೆ ಇವರಿಬ್ಬರೇ ಕಾರಣ. ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ್​ಗೌಡ ಕಾಂಗ್ರೆಸ್​ಗೆ ಮತ ಹಾಕ್ತೀನಿ ಅಂದಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಮತ ಹಾಕಲ್ಲ' ಎಂದು ಎಚ್​ಡಿಕೆ ಹೇಳಿದರು. ಕಾಂಗ್ರೆಸ್​ ಶಾಸಕರ 2ನೇ ಪ್ರಾಶಸ್ತ್ಯ ಮತಗಳು ಜೆಡಿಸ್​ಗೆ ಬಂದರೆ ಕುಪೇಂದ್ರ ರೆಡ್ಡಿ ಗೆಲ್ಲಬಹುದು ಎಂದೂ ಎಚ್​ಡಿಕೆ ಲೆಕ್ಕಾಚಾರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net