ಜೆಡಿಎಸ್​ -ಕಾಂಗ್ರೆಸ್​ನ ಘಟಾನುಘಟಿಗಳಿಗೆ ಕೋಟಿ-ಕೋಟಿ ಸಾಲ ಕೊಟ್ಟ ಕುಪೇಂದ್ರರೆಡ್ಡಿ! ದೇವೇಗೌಡರ ಕುಟುಂಬಕ್ಕೂ ಸಾಲ

kupendra reddy
Published on

ಬೆಂಗಳೂರು: ರಾಜ್ಯಸಭಾ ಚುನಾವಣೆಯ 6 ಅಭ್ಯರ್ಥಿಗಳ ಪೈಕಿ ಜೆಡಿಎಸ್​ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರೇ ಶ್ರೀಮಂತ. ಇವರು ಘಟಾನುಘಟಿ ನಾಯಕರಿಗೇ ಕೋಟಿ ಕೋಟಿ ಹಣ ಸಾಲ ಕೊಟ್ಟಿದ್ದಾರೆ. ಎಚ್​.ಡಿ.ದೇವೇಗೌಡರ ಕುಟುಂಬವೂ ಇವರಿಂದ ಸಾಲ ಪಡೆದಿದೆ. ನೂರಾರು ಆಸ್ತಿ ಒಡೆಯ ಕುಪೇಂದ್ರರೆಡ್ಡಿ ಅವರು 31.50 ಕೋಟಿಗೂ ಹೆಚ್ಚು ಹಣವನ್ನು ರಾಜ್ಯದ ಜೆಡಿಎಸ್​ ಮತ್ತು ಕಾಂಗ್ರೆಸ್​ನ ಕೆಲ ನಾಯಕರಿಗೆ ಸಾಲವಾಗಿ ಕೊಟ್ಟಿದ್ದಾರೆ.

  • ಮಂಡ್ಯ ಪುಟ್ಟರಾಜು- 2 ಕೋಟಿ ರೂ.
  • ಭವಾನಿ ರೇವಣ್ಣ -2 ಕೋಟಿ ರೂ.
  • ರಮೇಶ್ ಎಚ್.ಡಿ.- 3.90 ಕೋಟಿ ರೂ.
  • ಸೂರಜ್- 5.80 ಕೋಟಿ ರೂ.
  • ಕೊಂಡಯ್ಯ- 5 ಲಕ್ಷ ರೂ.
  • ಜಮೀರ್ ಅಹಮದ್ ಖಾನ್- 1 ಕೋಟಿ ರೂ.
  • ವೆಂಕಟೇಶ್ ಯು.ಬಿ.- 3.8 ಕೋಟಿ ರೂ.
  • ಚೆನ್ನಾಂಬಿಕ ಪಿಲಂ- 4 ಕೋಟಿ ರೂ.
  • ಪ್ರಜ್ವಲ್ ಆರ್​. - 1 ಕೋಟಿ ರೂಪಾಯಿ. .. ಹೀಗೆ ಹಲವರು ಕೋಟ್ಯಂತರ ಹಣವನ್ನು ಕುಪೇಂದ್ರ ರೆಡ್ಡಿ ಅವರಿಂದ ಸಾಲವಾಗಿ ಪಡೆದಿದ್ದಾರೆ. ಈ ಬಗ್ಗೆ ಸ್ವತಃ ಕುಪುಂದ್ರರೆಡ್ಡಿ ಅವರೇ ನಾಮಪತ್ರದ ಜತೆಗೆ ಆಸ್ತಿ ವಿವರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದಾರೆ. ಕುಪೇಂದ್ರ ರೆಡ್ಡಿ ಅವರು ಒಟ್ಟು 353.42 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 222,47,60,624 ರೂ. ಮೌಲ್ಯದ ಸ್ತಿರಾಸ್ತಿ ಸೇರಿ 575,89,75,550 ರೂ. ಒಡೆಯರಾಗಿದ್ದಾರೆ. ಕುಪೇಂದ್ರ ರೆಡ್ಡಿ 21,12,381 ರೂ. ನಗದು ಹೊಂದಿದ್ದರೆ, ಅವರ ಪತ್ನಿ ಆರ್.ಪುಷ್ಪಾವತಿ 43,41,108 ರೂ. ಹೊಂದಿದ್ದಾರೆ. ಅವಿಭಕ್ತ ಕುಟುಂಬದಲ್ಲಿ 9,32,408 ರೂ. ನಗದು ಇದೆ. ವಿವಿಧ ಹೂಡಿಕೆಗಳು: ಬಾಂಡ್, ಷೇರು, ಮ್ಯೂಚುವಲ್ ಫಂಡ್​ಗಳಲ್ಲಿ 88.44 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಪತ್ನಿ ಹೆಸರಿನಲ್ಲಿ 9.06 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ವೈಯಕ್ತಿಕ ಸಾಲ, ಮುಂಗಡ ಸೇರಿ ಒಟ್ಟು 244.46 ಲಕ್ಷ ರೂ. ಮತ್ತು ಪತ್ನಿ ಹೆಸರಿನಲ್ಲಿ 242.18 ಲಕ್ಷ ರೂ. ಹಾಗೂ ಅವಿಭಕ್ತ ಕುಟುಂಬದ ಹೆಸರಿನಲ್ಲಿ 43.95 ಲಕ್ಷ ರೂ. ಇದೆ. 1 ಆಡಿ ಹಾಗೂ 2 ಟೊಯೋಟಾ ಫಾರ್ಚುನರ್ ಕಾರುಗಳನ್ನು ಹೊಂದಿದ್ದು, ಅವುಗಳ ಒಟ್ಟು ಮೌಲ್ಯ 1.35 ಕೋಟಿ ರೂ.ಗಳಾಗಿದೆ. ರೆಡ್ಡಿ ಬಳಿ 1.74 ಕೋಟಿ ರೂ. ಮೌಲ್ಯದ ಚಿನ್ನಾಭರಣವಿದ್ದರೆ, ಅವರ ಪತ್ನಿ ಹೆಸರಿನಲ್ಲಿ 3.51 ಕೋಟಿ ರೂ. ಬೆಲೆಯ ಚಿನ್ನಾಭರಣಗಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net