More

    ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್​ ವಿರುದ್ಧ ರಣತಂತ್ರ ಹೆಣೆದ ಕಾಂಗ್ರೆಸ್​! ಇಲ್ಲಿದೆ ಕೈ ನಾಯಕರ ಲೆಕ್ಕಾಚಾರ

    ಬೆಂಗಳೂರು: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆಗೆ ಅಚ್ಚರಿ ರೂಪದಲ್ಲಿ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಸಿರುವ ಕಾಂಗ್ರೆಸ್​, ಜೆಡಿಎಸ್​ ಅಭ್ಯರ್ಥಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ನಿನ್ನೆ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿದ್ದ ಕುಪ್ಪೇಂದ್ರ ರೆಡ್ಡಿ, ತನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು. ಇದ್ದಕ್ಕಿದ್ದಂತೆ ಕಾಂಗ್ರೆಸ್‌ 2ನೇ ಅಭ್ಯರ್ಥಿಯನ್ನು ನಿಲ್ಲಿಸಿದ್ದೇಕೆ? ಅಚ್ಚರಿ ರಾಜ್ಯ ನಾಯಕರ ಲೆಕ್ಕಾಚಾರ ಏನಿರಬಹುದು? ಎಂಬ ಪ್ರಶ್ನೆಗಳು ಉದ್ಭವಿಸಿವೆ. ಕಾಂಗ್ರೆಸ್​ನ ಲೆಕ್ಕಾಚಾರ ಏನಿರಬಹುದು ಎಂಬುದಕ್ಕೆ ಇಲ್ಲಿದೆ ಉತ್ತರ.

    1. ಜೆಡಿಎಸ್- ಬಿಜೆಪಿ ಬಹಿರಂಗ ಮೈತ್ರಿ ಜಗಜ್ಜಾಹೀರಾಗಲಿ.
    2. ನಾವು ಜೆಡಿಎಸ್​ನಿಂದ ದೂರ ಇದ್ದೇವೆ ಎಂದು ಬಿಂಬಿಸಲು.
    3. ಇಬ್ರಾಹಿಂಗೆ ಅಧ್ಯಕ್ಷ ಸ್ಥಾನ ಹೊರತು ಬೇರೆ ಅವಕಾಶ ನೀಡಿಲ್ಲ, ನಾವು ಅಲ್ಪಸಂಖ್ಯಾತರ ಪರ ಎಂದು ಬಿಂಬಿಸಲು ಮನ್ಸೂರ್ ಅಲಿ ಖಾನ್‌ಗೆ ಅವಕಾಶ.
    4. ಕುಪೇಂದ್ರ ರೆಡ್ಡಿಗೆ ಈ ಹಿಂದೆ ಕಾಂಗ್ರೆಸ್ ಬೆಂಬಲಿಸಿತ್ತು, ಈ ಬಾರಿ ನಮ್ಮ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಅವರು ಬೆಂಬಲಿಸಲಿ.
    5. ಜೆಡಿಎಸ್‌ನಲ್ಲಿ ಒಡಕಿದೆ. ಅದರ ಲಾಭ ಪಡೆಯಲು ಸಾಧ್ಯವಾದರೆ ಬಳಸಿಕೊಳ್ಳುವುದು.
      ಕಾಂಗ್ರೆಸ್‌‌ನಲ್ಲಿರುವ ಮತಗಳು: 70
      ಒಬ್ಬ ಅಭ್ಯರ್ಥಿ ಗೆಲ್ಲಲು ಬೇಕಾದ ಮತ: 45
      ಕಾಂಗ್ರೆಸ್‌ನಲ್ಲಿರುವ ಹೆಚ್ಚುವರಿ‌ ಮತಗಳು: 24
      ಕಾಂಗ್ರೆಸ್‌ಗೆ ಬೇಕಿರುವುದು: 21
      ಜೆಡಿಎಸ್‌ನ ಎರಡನೇ ಪ್ರಾಶಸ್ತ್ಯದ ಮತದ ಮೇಲೆ ಕಾಂಗ್ರೆಸ್​ ಕಣ್ಣಿಟ್ಟಿದೆ

    2ನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿದ ಕಾಂಗ್ರೆಸ್​: ಜೈರಾಜ್​ ರಮೇಶ್​-ಮನ್ಸೂರ್ ನಾಮಪತ್ರ ಸಲ್ಲಿಕೆ

    PSI ಪರೀಕ್ಷೆಯಲ್ಲಿ ಅಕ್ರಮ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ಕೊನೆಗೂ ಅರೆಸ್ಟ್​! ಗಂಡನೂ ಸಿಕ್ಕಿಬಿದ್ದ

    40 ದಿನದ ಮಗು ಹೊಟ್ಟೆಯಲ್ಲಿ ಭ್ರೂಣ! ಹೊಟ್ಟೆ ಉಬ್ಬರಿಸಿದೆ, ಮೂತ್ರ ವಿಸರ್ಜಿಸುತ್ತಿಲ್ಲ… ಎಂದು ಆಸ್ಪತ್ರೆಗೆ ಹೋದವರಿಗೆ ಶಾಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts