ನಾಳೆ ಪಂಜಾಬ್ ಸಿಎಂ ಮದುವೆ: ಭಗವಂತ್​ ಮಾನ್​ರ 2ನೇ ಪತ್ನಿ ಆಗಲಿರುವ ವಧು ಯಾರು?

Punjab CM Bhagwant Mann
Published on

ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್​ ಮಾನ್ ಅವರು ಮತ್ತೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧರಾಗಿದ್ದು, ನಾಳೆ (ಗುರುವಾರ) ಕುಟುಂಬಸ್ಥರ ಸಮ್ಮುಖದಲ್ಲಿ 2ನೇ ಮದುವೆಯಾಗಲಿದ್ದಾರೆ.

ಚಂಡೀಗಢದ ತಮ್ಮ ನಿವಾಸದಲ್ಲಿ ಡಾ. ಗುರುಪ್ರಿತ್ ಕೌರ್​ ಜತೆ ಪಂಜಾಬ್ ಸಿಎಂ ಸಪ್ತಪದಿ ತುಳಿಯಲಿದ್ದಾರೆ. ಭಗವಂತ್ ಮಾನ್​ ಅವರಿಗೆ ಈಗಾಗಲೇ ಇಂದ್ರಪ್ರೀತ್ ಕೌರ್ ಎಂಬುವರ ಜತೆ ಮದುವೆ ಆಗಿತ್ತು. ಇವರಿಬ್ಬರ ಸಂಬಂಧ 2015ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಮುರಿದು ಬಿದ್ದಿತ್ತು. ಇವರ ಮಾಜಿ ಪತ್ನಿ ಹಾಗೂ ಮಕ್ಕಳು ಅಮೆರಿಕಾದಲ್ಲಿ ನೆಲೆಸಿದ್ದಾರೆ.

6 ವರ್ಷದಿಂದ ಏಕಾಂಗಿಯಾಗಿದ್ದ ಭಗವಂತ್ ಮಾನ್​ ಅವರು ಇದೀಗ ಮತ್ತೊಂದು ಮದ್ವೆ ಆಗುತ್ತಿದ್ದಾರೆ. ಆಮ್​ ಆದ್ಮಿ ಪಕ್ಷದ ನಾಯಕರಾದ ಭಗವಂತ್ ಮಾನ್​, ಇತ್ತೀಚಿಗೆ ನಡೆದ ಪಂಜಾಬ್​ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ ಗೆಲ್ಲಿಸಿಕೊಂಡು ದಾಖಲೆ ಬರೆದಿದ್ದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಇವರು, ಈಗಾಗಲೇ ಮೊದಲ ಬಜೆಟ್​ ಅನ್ನೂ ಮಂಡಿಸಿದ್ದಾರೆ.

ಮೊದಲ ಪತ್ನಿಯಿಂದ ದೂರವಾಗಿರುವ ಭಗವಂತ್ ಮಾನ್​ ಅವರಿಗೆ ತಾಯಿ ಹಾಗೂ ಸಹೋದರಿ ಇಬ್ಬರೂ ಮತ್ತೊಂದು ಮದ್ವೆ ಆಗಲು ಒಪ್ಪಿಸಿ, ವೈದ್ಯೆಯಾಗಿರುವ ಡಾ. ಗುರುಪ್ರೀತ್ ಕೌರ್​ ಅವರನ್ನು ವಧುವಾಗಿ ಆಯ್ಕೆ ಮಾಡಿದ್ದಾರೆ. ನಾಳೆ ನಡೆಯಲಿರುವ ಪಂಜಾಬ್​ ಸಿಎಂ ಮದ್ವೆ ಕಾರ್ಯಕ್ರಮದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಾಲ್ಗೊಳ್ಳಲಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net