ಲಂಡನ್​ ಮಹಿಳೆ ಬಿಹಾರ್ ಸಿಎಂ ಅಭ್ಯರ್ಥಿ! ರಾಜಧಾನಿಯಲ್ಲಿ ತಲೆ ಎತ್ತಿತು ಪೋಸ್ಟರ್​, ಅವಳಿಷ್ಟ ಎಂದ ಅಪ್ಪ

patna poster on priya
Published on

ಪಾಟ್ನಾ: ಲಂಡನ್​ ನಿವಾಸಿ, ಜೆಡಿಯುನ ಮಾಜಿ ಎಮ್​ಎಲ್​ಸಿಯ ಮಗಳು ಪ್ರಿಯಾ ಚೌಧರಿ ತಾನು ಬಿಹಾರ ವಿಧಾನ ಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ನಿನ್ನೆ (ಮಾ.8) ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದ ಆಕೆಯ ಪೋಸ್ಟರ್​ ಇದೀಗ ಪಾಟ್ನಾದಲ್ಲಿ ತಲೆ ಎತ್ತಿ ನಿಂತಿದೆ.

ಜೆಡಿಯುನ ಮಾಜಿ ಎಮ್​ಎಲ್​ಸಿ ವಿನೋದ್​ ಚೌಧರಿ ಅವರ ಮಗಳು ಪ್ರಿಯಾ ಚೌಧರಿ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಪಬ್ಲಿಕ್​ ಅಡ್ಮಿನಿಸ್ಟ್ರೇಷನ್​ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿರುವ ಆಕೆ ಈ ಬಾರಿ ಬಿಹಾರದ ವಿಧಾನಸಭಾ ಚುನಾವಣೆಗೆ ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಬಿಹಾರವನ್ನು ಪ್ರೀತಿಸುವವರು, ರಾಜಕೀಯವನ್ನು ದ್ವೇಷಿಸುವವರು ನನ್ನ ಜತೆ ಸೇರಿ ಎನ್ನುವ ಜಾಹಿರಾತನ್ನು ಆಕೆ ನಿನ್ನೆ ಕೆಲ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಇದೀಗ ಆಕೆ ಸಿಎಂ ಅಭ್ಯರ್ಥಿ ಎನ್ನುವ ಪೋಸ್ಟರ್ ಪಾಟ್ನಾ ನಗರದಲ್ಲಿ ಕಾಣಿಸಿಕೊಂಡಿದೆ.

ತನ್ನ ಮಗಳು ನೀಡಿರುವ ಜಾಹಿರಾತಿನ ಬಗ್ಗೆ ಮಾತನಾಡಿದ್ದ ವಿನೋದ್​ ಚೌಧರಿ, ಆಕೆಗೆ ಸ್ವಂತ ಬುದ್ಧಿ ಇದೆ. ಇದು ಅವಳ ನಿರ್ಧಾರ. ಒದು ವೇಳೆ ಆಕೆ ಪಕ್ಷದ ಹಿರಿಯ ಮುಖಂಡರುಗಳಿಗೇ ಸವಾಲೆಸೆದರೆ ಪಕ್ಷ ಖಂಡಿತವಾಗಿಯೂ ಆಕೆಗೆ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net