ಪಾಲಕರ ಎಡವಟ್ಟು; ಸೊಳ್ಳೆ ನಿವಾರಕ ಔಷಧಿ ಸೇವಿಸಿ ಪ್ರಾಣ ಕಳೆದುಕೊಂಡ ಒಂದೂವರೆ ವರ್ಷದ ಮಗು!

12313
Published on

ನಾಗ್ಪುರ: ಕೀಟಗಳು, ಸೊಳ್ಳೆಗಳ ಉಪಟಳ ಇತ್ಯಾದಿ ಕಾರಣಗಳಿಗೆ ಪರಿಹಾರವಾಗಿ ವಿಷ ಔಷಧಿಗಳನ್ನು ಬಳಕೆ ಮಾಡಲಾಗುತ್ತದೆ. ಈ ವೇಳೆ ವಿಷಕಾರಕಗಳನ್ನು ಸಾಮಾನ್ಯವಾಗಿ ಮಕ್ಕಳಿಗೆ ಎಟುಕದ ಜಾಗದಲ್ಲಿ ಇರಿಸಲಾಗುತ್ತದೆ. ಕಾರಣ ಏನೂ ಅರಿಯದ ವಯಸ್ಸಿನವರು ಎಡವಟ್ಟು ಮಾಡಿಕೊಳ್ಳುವುದು ಬೇಡವೆಂದು. ಆದರೆ ಇಲ್ಲೊಂದು ಮನೆಯ ಮಗು ಪಾಲಕರ ಎಡವಟ್ಟಿನಿಂದ ಸೊಳ್ಳೆ ನಿವಾರಕ ಔಷಧಿಯನ್ನು ಸೇವಿಸಿ ಪ್ರಾಣ ಕಳೆದುಕೊಂಡಿದೆ.

ಒಂದೂವರೆ ವರ್ಷದ ಬಾಲಕಿಯೊಬ್ಬಳು ಸೊಳ್ಳೆ ನಿವಾರಕ ಔಷಧಿಯ ಬಾಟಲಿಯೊಂದಿಗೆ ಆಟವಾಡುತ್ತಿದ್ದಾಗ, ಅದರಲ್ಲಿದ್ದ ವಿಷ ಹೊಟ್ಟೆಯೊಳಗೆ ಸೇರಿದೆ. ಪರಿಣಾಮ ರಿದ್ಧಿ ದಿನೇಶ್ ಚೌಧರಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಈ ಘಟನೆ ಮಹಾರಾಷ್ಟ್ರದ ಸಕ್ರದಾರ ಪ್ರದೇಶದ ಆಶೀರ್ವಾದ್ ನಗರದಲ್ಲಿ ನಡೆದಿದೆ.

ಮನೆಲ್ಲಿಯಲ್ಲಿ ಸೊಳ್ಳೆ ಕಾಟವಿದ್ದ ಕಾರಣ, ಸೊಳ್ಳೆ ನಿವಾರಕ ಔಷಧಿಯನ್ನು ಬಳಸುತ್ತಿದ್ದರೆ. ಆದರೆ ಏನೂ ಅರಿಯದ ಒಂದೂವರೆ ವರ್ಷದ ಮಗು ವಿಷೌಷಧ ಬಾಟಲಿಯೊಂದಿಗೆ ಆಟವಾಡಿದೆ. ಮನೆಕೆಲಸದಲ್ಲಿ ನಿರತರಾಗಿದ್ದ ಪಾಲಕರಿಗೆ ತಮ್ಮ ಮಗು ಯಾವುದರೊಂದಿಗೆ ಆಟವಾಡುತ್ತಿದೆ ಎಂಬುದರತ್ತ ಗಮನ ನೀಡಿದಲ್ಲ. ಅಷ್ಟರಲ್ಲಾಗಲೇ ಬಾಟಲಿಯಲ್ಲಿದ್ದ ವಿಷ ಮಗುವಿನ ಹೊಟ್ಟೆ ಸೇರಿದೆ.

ಆಡವಾಡುತ್ತಿದ್ದ ಮಗು ಅಸ್ವಸ್ಥಗೊಂಡು ಬಿದ್ದಿರುವುದನ್ನು ನೋಡಿದೆ ಪಾಲಕರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ನಂತರ ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮಗು ಮೃತಪಟ್ಟಿರುವುದು ಗೊತ್ತಾಗಿದೆ. ಸದ್ಯ ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net