ಲಿಂಗ ಪರಿವರ್ತನೆ ಮಾಡಿಸಿಕೊಂಡು ತನ್ನ ಸ್ನೇಹಿತನನ್ನು ಮದುವೆಯಾದ ವ್ಯಕ್ತಿ!: ವಿಡಿಯೋ ಇಲ್ಲಿದೆ ನೋಡಿ.. | Married

dk - 2025-06-24T190557.065
Published on

Married: ಲಿಂಗ ಪರಿವರ್ತನೆ ಮಾಡಿಕೊಂಡು ತನ್ನ ಸಹ ಸಲಿಂಗಕಾಮಿಯೊಬ್ಬರನ್ನು(ಸ್ನೇಹಿತ) ಮದುಗೆಯಾಗದ ವಿಚಿತ್ರ ಘಟನೆ ಉತ್ತರಪ್ರದೇಶದ ಕುಶಿನಗರದಲ್ಲಿ ನಡೆದಿದೆ. ಈ ಕರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿದೆ.

'ಪ್ರೀತಿಗೆ ಕಣ್ಣಿಲ್ಲ...' ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹೌದು, ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಪುರುಷರು ಉತ್ತರ ಪ್ರದೇಶದ ಕುಶಿನಗರದಲ್ಲಿ ಮದುವೆಯಾಗಿದ್ದಾರೆ. ಭಾರತದಲ್ಲಿ ಸಲಿಂಗ ವಿವಾಹ ಕಾನೂನಿನ ಮಿತಿಗಳಿಂದಾಗಿ, ವ್ಯಕ್ತಿ ತನ್ನ ಲಿಂಗವನ್ನು ಬದಲಾಯಿಸಿಕೊಂಡು ಮಹಿಳೆಯಾಗಿ ತನ್ನ ಪ್ರಿಯಕರ ಮದುವೆಯಾಗಿದ್ದಾನೆ.

ಪ್ರೇಮ್ ಮತ್ತು ಸೋನು ಎಂಬ ಇಬ್ಬರು ಹುಡುಗರು ದೀರ್ಘಕಾಲದಿಂದ ಪರಸ್ಪರ ಸಂಬಂಧ ಹೊಂದಿದ್ದರು. ಪ್ರೇಮ್ ಅವರನ್ನು ಮದುವೆಯಾಗಲು ಸೋನು ತನ್ನ ಲಿಂಗವನ್ನು ಹೆಣ್ಣಾಗಿ ಬದಲಾಯಿಸಿಕೊಂಡು ಸೋನಿಯಾ ಆದನು. ವೈರಲ್ ಆಗಿರುವ ವೀಡಿಯೊದಲ್ಲಿ, ದಂಪತಿಗಳು ವಿವಾಹ ಸಮಾರಂಭಗಳನ್ನು ನಡೆಸುತ್ತಿರುವುದನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ @statemirrornews ಪೋಸ್ಟ್ ಮಾಡಿದೆ.

ವಿಡಿಯೋದಲ್ಲೇನಿದೆ..?

ಪ್ರೇಮ್ ಮತ್ತು ಸೋನಿಯಾ ಶಿವ ಮಂದಿರದಲ್ಲಿ ವಿವಾಹವಾದರು. ವೈರಲ್ ಆಗಿರುವ ವಿಡಿಯೋದಲ್ಲಿ, ಸೋನಿಯಾ ಕೆಂಪು ಸೂಟ್ ಧರಿಸಿ ಮೊಣಕಾಲುಗಳ ಮೇಲೆ ಕುಳಿತಿದ್ದಾರೆ ಮತ್ತು ಪ್ರೇಮ್ ಸಿಂಧೂರ್ ಸಮಾರಂಭವನ್ನು ಮಾಡುತ್ತಿದ್ದಾರೆ. ವಿವಾಹದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net