ಎಲ್ಲರಿಗೆ ಭೂಮಿ, ವಸತಿ ಸರ್ಕಾರದ ಗುರಿ : ಮನೆ ಕೀಲಿಕೈ ಹಸ್ತಾಂತರಿಸಿ ಸಚಿವ ಒ.ಆರ್.ಕೇಳು ಹೇಳಿಕೆ

New Project (20)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಸಮಾಜದ ಎಲ್ಲ ವರ್ಗದ ಜನರಿಗೂ ಭೂಮಿ ಲಭ್ಯವಾಗಿಸುವುದರ ಜತೆಗೆ ಅವರಿಗೆ ವಸತಿ ನಿರ್ಮಣಕ್ಕೆ ಅಗತ್ಯ ಸೌಕರ್ಯ ಒದಗಿಸಿಕೊಡಲಾಗುವುದು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಒ.ಆರ್.ಕೇಳು ತಿಳಿಸಿದರು.

ಪಣತ್ತಡಿ ಗ್ರಾಮ ಪಂಚಾಯಿತಿಯ ಆರನೇ ವಾರ್ಡ್‌ನ ಕಮ್ಮಾಡಿಯಲ್ಲಿ ಪ್ರಾಕೃತಿಕ ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಚಟುವಟಿಕೆಗಳ ಅಂಗವಾಗಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ತಲಾ 6 ಲಕ್ಷ ರೂ. ವೆಚ್ಚದಲ್ಲಿ ಹತ್ತು ಕುಟುಂಬಗಳಿಗೆ ನಿರ್ಮಿಸಿದ ಮನೆಗಳ ಕೀಲಿಕೈ ಹಸ್ತಾಂತರಿಸಿ ಮಾತನಾಡಿದರು.

ಹೊಸದುರ್ಗ ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ.ಮಧುಸೂದನನ್ ವರದಿ ಮಂಡಿಸಿದರು. ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ ಕುಡಿಯುವ ನೀರಿನ ಸೌಲಭ್ಯ ಉದ್ಘಾಟಿಸಿದರು. ಕಾಸರಗೋಡು ಎಡಿಎಂಪಿ ಅಖಿಲ್, ಪಣತ್ತಡಿ ಗ್ರಾಪಂ ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್, ಪರಪ್ಪ ಬ್ಲಾಕ್ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಪದ್ಮಕುಮಾರಿ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲರಿಗೂ ಭೂಮಿ, ಎಲ್ಲರಿಗೂ ಹಕ್ಕುಪತ್ರ ಎಂಬ ಸರ್ಕಾರದ ಧ್ಯೇಯದನ್ವಯ ಕೇರಳದ ಎಲ್ಲ ತಾಲೂಕುಗಳಲ್ಲಿ ಎಲ್ಲರಿಗೆ ಭೂಮಿ ಹಾಗೂ ಹಕ್ಕುಪತ್ರಗಳನ್ನು ಅದಾಲತ್ ಪ್ರಕ್ರಿಯೆ ಮೂಲಕ ಲಭ್ಯವಾಗುವಂತೆ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಲೈಫ್ ಆ್ಯಂಡ್ ಸೇಫ್ ಯೋಜನೆಗಳ ಮೂಲಕ ಪರಿಶಿಷ್ಟ ಪಂಗಡಗಳಿಗೆ ಸುರಕ್ಷಿತ ವಸತಿ ಖಾತ್ರಿಪಡಿಸಲಾಗುವುದು. ಒ.ಆರ್.ಕೇಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ https://www.vijayavani.net/inauguration-of-the-new-building-of-the-cheruvattur-iti-administrative-block https://www.vijayavani.net/poye-constituency-administrative-committee-general-assembly

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net