ನಡುಬೀದಿಯಲ್ಲಿ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು | Murdered

dk - 2025-06-24T161927.115
Published on

ಹಾವೇರಿ: ಶಿಗ್ಗಾಂವಿ ಪಟ್ಟಣದ ಹೊಂಡಾ ಶೋರೂಂ ಹತ್ತಿರ ಹಾಡಹಗಲೇ ವ್ಯಕ್ತಿಯನ್ನು ಕೊಚ್ಚಿ ಕೊಲೆಗೈದ( Murdered) ಘಟನೆ ಮಂಗಳವಾರ(ಜೂ.24) ನಡೆದಿದೆ.

ಕಾಂಗ್ರೆಸ್ ಮುಖಂಡ ಶಿವಾನಂದ ಕುನ್ನೂರ ಕೊಲೆಯಾದವರು. ಸ್ಥಳಕ್ಕೆ ಶಿಗ್ಗಾಂವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಮಾರು ಎಂಟರಿಂದ ಹತ್ತು ಜನರ ತಂಡ ಕಾರಿನಲ್ಲಿ ಬಂದು ಹೊಂಡಾ ಶೋರೂಂ ಬಳಿ ನಿಂತಿದ್ದ ಶಿವಾನಂದ ಕುನ್ನೂರ ಅವರ ಮೇಲೆ ಏಕಾಏಕಿ ದಾಳಿ ಮಾಡಿ, ಕೊಲೆಗೈದು ಪರಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net