

ಬೆಂಗಳೂರು: ಮೊನ್ನೆ ಗೂಗಲ್ ಆಯ್ತು, ಇದೀಗ ಈ ಕಾಮರ್ಸ್ ವೆಬ್ಸೈಟ್ ಅಮೆಜಾನ್ನಿಂದ ಕನ್ನಡಕ್ಕೆ ಅಪಮಾನ ಮಾಡಲಾಗಿದೆ. ಮಹಿಳೆಯರ ಒಳಉಡುಪನ್ನು ಕನ್ನಡ ಧ್ವಜದ ಬಣ್ಣ ಹೋಲುವ ಬಟ್ಟೆಯಲ್ಲಿ ಸಿದ್ಧಪಡಿಸಿದ ಅಮೆಜಾನ್ ಆನ್ಲೈನ್ ಶಾಪಿಂಗ್ ಕಂಪನಿಯು, ಅದರ ಮೇಲೆ ಕರ್ನಾಟಕದ ಲಾಂಛನ ಮುದ್ರಿಸಿ ಮಾರಾಟಕ್ಕಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಕರ್ನಾಟಕದ ಧ್ವಜ ಹೋಲುವ ರೀತಿಯಲ್ಲಿ ಕೆಂಪು ಮತ್ತು ಹಳದಿ ಬಣ್ಣದಲ್ಲಿ ಮಹಿಳೆಯರ ಒಳಉಡುಪನ್ನು ಸಿದ್ಧಪಡಿಸಲಾಗಿದೆ. ಜತೆಗೆ ಕರ್ನಾಟಕ ಲಾಂಛನದ ಚಿಹ್ನೆಯನ್ನೂ ಮುದ್ರಿಸಲಾಗಿದೆ. ಅಮೆಜಾನ್ ಕಂಪನಿಯ ಈ ಕಾರ್ಯಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.