

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಕು ಮರಣಮೃದಂಗ ಭಾರಿಸುತ್ತಿದೆ. ಸಾವು-ನೋವಿನ ಪ್ರಮಾಣ ಶರವೇಗದಲ್ಲಿ ಸಾಗುತ್ತಿದ್ದು, ಜನರ ಜೀವನ ಅಲ್ಲೋಲ-ಕಲ್ಲೋಲ ಆಗಿದೆ. ಇದೀಗ ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಆನಂದ ಅವರು ಕರೊನಾಗೆ ಬಲಿಯಾಗಿದ್ದಾರೆ.
ಆನಂದ ಅವರ ಸಾವಿಗೆ ಟ್ವೀಟ್ ಮೂಲಕ ಸಂತಾಪ ಸೂಚಿಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಆನಂದ ಅವರು ಕರೊನಾಗೆ ತುತ್ತಾಗಿ ವಿಧಿವಶರಾಗಿದ್ದು ಅತ್ಯಂತ ನೋವಿನ ಸಂಗತಿ. ಅವರ ನಿಧನದಿಂದ ಕ್ರಿಯಾಶೀಲ ಯುವ ಮುಖಂಡರನ್ನು ಪಕ್ಷ ಕಳೆದುಕೊಂಡಂತಾಗಿದೆ. ಅವರ ಕುಟುಂಬದವರಿಗೆ ಮೃತರ ಅಗಲಿಕೆಯ ನೋವು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.