

Heart Breaking : (ರಾಯಚೂರು) ಸಂಸಾರದ ಸುಖ-ದುಃಖದಲ್ಲೂ ಒಂದಾಗಿದ್ದ ದಂಪತಿ ಸಾವಿನಲ್ಲೂ ಒಂದಾದ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದಲ್ಲಿ ಮಾ.28 (ಶುಕ್ರವಾರ) ಜರುಗಿದೆ.
ಬಿ.ಅಮರಮ್ಮ(57),ಬಿ.ರಾಜಶೇಖರ (60) ಮೃತಪಟ್ಟ ಸತಿಪತಿಗಳು. ಕಳೆದ ಒಂದು ತಿಂಗಳಿಂದ ಬಿ.ಅಮರಮ್ಮ ಪಾರ್ಶ್ವವಾಯುನಿಂದ ಬಳಲುತ್ತಿದ್ದರು. ಇವರು ಮಾ.27 ರಂದು ರಾತ್ರಿ ನಿಧನರಾದರು. ಈ ಸುದ್ದಿ ತಿಳಿದ ಪತಿ ಬಿ.ರಾಜಶೇಖರ ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ. ಪತ್ನಿಯ ಚಿಂತೆಯಲ್ಲಿದ್ದ ಇವರು, ಮಾ.28 ಬೆಳಗಿನ ಜಾವ ಕೂಡ ಪ್ರಾಣ ಬಿಟ್ಟಿದ್ದಾರೆ.
ಇವರಿಗೆ ಪುತ್ರ, ಪುತ್ರಿ ಇದ್ದು, ಶುಕ್ರವಾರ ಸಂಜೆ ಅಂತ್ಯ ಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.