ಝೈದ್​ ಖಾನ್​ ಅಭಿನಯದ ಹೊಸ ಚಿತ್ರ ಯಾವುದು? ಇಲ್ಲಿದೆ ಡೀಟೇಲ್ಸ್​ …

Banaras 6
Published on

ಬೆಂಗಳೂರು: ಝೈದ್​ ಖಾನ್​ ನಾಯಕನಾಗಿ ಅಭಿನಯಿಸಿರುವ ‘ಬನಾರಸ್​’ ಚಿತ್ರವು ಎರಡನೇ ವಾರಕ್ಕೆ ಕಾಲಿಟ್ಟಿದೆ. ಎಲ್ಲ ಸರಿ, ಝೈದ್​ ಖಾನ್ ಅವರ​ ಮುಂದಿನ ನಡೆ ಏನು? ಎಂಬ ಪ್ರಶ್ನೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ.

ಬನಾರಸ್, ಝೈದ್​ ಅಭಿನಯದ ಮೊದಲ ಚಿತ್ರ. ಈ ಚಿತ್ರವನ್ನು ಜಯತೀರ್ಥ ನಿರ್ದೇಶನ ಮಾಡಿದ್ದರು. ಮುಂದಿನ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬ ಪ್ರಶ್ನೆ ಸಹಜವೇ. ಮೂಲಗಳ ಪ್ರಕಾರ, ಝೈದ್​ ಅಭಿನಯದ ಎರಡನೇ ಚಿತ್ರವನ್ನು ಎ. ಹರ್ಷ ನಿರ್ದೇಶನ ಮಾಡಲಿದ್ದಾರಂತೆ.

‘ಭಜರಂಗಿ’, ‘ಅಂಜನಿ ಪುತ್ರ’ ಮುಂತಾದ ಹಿಟ್​ ಚಿತ್ರಗಳನ್ನು ನಿರ್ದೇಶಿಸಿರುವ ಹರ್ಷ, ಸದ್ಯ ಶಿವರಾಜಕುಮಾರ್​ ಅಭಿನಯದ 125ನೇ ಚಿತ್ರವಾದ ವೇದ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ಡಿ. 23ರಂದು ಬಿಡುಗಡೆಯಾಗಲಿದ್ದು, ಆ ನಂತರ ಝೈದ್​ ಖಾನ್​ ಅಭಿನಯದಲ್ಲಿ ಹೊಸ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ.

ಈ ಚಿತ್ರವನ್ನು ಯಾರು ನಿರ್ಮಿಸುತ್ತಾರೆ, ಚಿತ್ರ ಯಾವ ಜಾನರ್​ಗೆ ಸೇರುತ್ತದೆ ಎಂಬೆಲ್ಲ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ವೇದ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳನ್ನು ಮುಗಿಸಿ, ಆ ನಂತರ ಝೈದ್​ ಖಾನ್​ ಅಭಿನಯದ ಹೊಸ ಚಿತ್ರದ ಗಮನಹರಿಸಲಿದ್ದಾರಂತೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net