ಪ್ರಶಸ್ತಿ ವಿಜೇತ ಸೈನಿಕರಿಗೆ ಸಹಿ ಸುದ್ದಿ: ಅನುದಾನ ಮೊತ್ತ 6 ಪಟ್ಟು ಏರಿಕೆ, ಯಾವುದಕ್ಕೆ ಎಷ್ಟು? ಇಲ್ಲಿದೆ ಡಿಟೇಲ್ಸ್

indian army jan 14
Published on

ಬೆಂಗಳೂರು: ಭಾರತೀಯ ಸೇನೆಯಲ್ಲಿ ಅತ್ಯುತ್ತಮ ಸೇವೆ, ಸಾಹಸಕ್ಕೆ ನೀಡುವ ಶೌರ್ಯ, ಶೌರ್ಯೇತರ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಶಸ್ತಿ ವಿಜೇತರಿಗೆ ಸರ್ಕಾರ ನೀಡುತ್ತಿದ್ದ ಅನುದಾನ ಮೊತ್ತವನ್ನು ಆರು ಪಟ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.

ರಾಷ್ಟ್ರ ರಕ್ಷಣೆಗೆ ಯೋಧರ ಮನೋಭಿಲಾಷೆ ಮತ್ತು ಮನೋಸ್ಥೈರ್ಯ ಹೆಚ್ಚಿಸಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಸೈನಿಕರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ. ಈಗಾಗಲೇ ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯಿಂದ ಪ್ರಶಸ್ತಿ ವಿಜೇತ ಯೋಧರಿಗೆ ನೀಡಲಾಗುತ್ತಿದ್ದ ಅನುದಾನವನ್ನು ಹೆಚ್ಚಿಸುವಂತೆ ಮನವಿ ಬಂದಿದ್ದವು. ಇದಕ್ಕೆ ಸರ್ಕಾರ ಸಮ್ಮತಿಸಿ ಅನುದಾನ ಮೊತ್ತವನ್ನು ಏರಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಈ ಮೂಲಕ ದೇಶದ ರಕ್ಷಣೆಗೆ ಪ್ರಾಣವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ.

ಯಾವ ಪ್ರಶಸ್ತಿಗೆ ಎಷ್ಟು ಅನುದಾನ?

ಪರಮವೀರ ಚಕ್ರ: ಪ್ರಸ್ತುತ ಅನುದಾನ-25 ಲಕ್ಷ ರೂ., ಪರಿಷ್ಕೃತ ಅನುದಾನ 1.5 ಕೋಟಿ ರೂಪಾಯಿ

ಮಹಾವೀರ ಚಕ್ರ: ಪ್ರಸ್ತುತ ಅನುದಾನ 12 ಲಕ್ಷ ರೂ., ಪರಿಷ್ಕೃತ ಅನುದಾನ 1 ಕೋಟಿ ರೂಪಾಯಿ

ಅಶೋಕ ಚಕ್ರ: ಪ್ರಸ್ತುತ ಅನುದಾನ 25 ಲಕ್ಷ ರೂ., ಪರಿಷ್ಕೃತ ಅನುದಾನ 1.50 ಕೋಟಿ ರೂಪಾಯಿ

ಕೀರ್ತಿ ಚಕ್ರ: ಪ್ರಸ್ತುತ ಅನುದಾನ 12 ಲಕ್ಷ ರೂ., ಪರಿಷ್ಕೃತ ಅನುದಾನ 1 ಕೋಟಿ ರೂಪಾಯಿ

ವೀರ ಚಕ್ರ: ಪ್ರಸ್ತುತ ಅನುದಾನ 8 ಲಕ್ಷ ರೂ., ಪರಿಷ್ಕೃತ ಅನುದಾನ 50 ಲಕ್ಷ ರೂಪಾಯಿ

ಶೌರ್ಯ ಚಕ್ರ: ಪ್ರಸ್ತುತ ಅನುದಾನ 8 ಲಕ್ಷ ರೂ., ಪರಿಷ್ಕೃತ ಅನುದಾನ 50 ಲಕ್ಷ ರೂಪಾಯಿ

ಸೇನಾ/ನೌಕಾ/ವಾಯು ಸೇನಾ ಮೆಡಲ್: ಪ್ರಸ್ತುತ ಅನುದಾನ 2 ಲಕ್ಷ ರೂ., ಪರಿಷ್ಕೃತ ಅನುದಾನ15 ಲಕ್ಷ ರೂಪಾಯಿ

ಮೆನ್ ಶನ್ ಎನ್ ಡಿಸ್ ಪ್ಯಾಚ್: ಪ್ರಸ್ತುತ ಅನುದಾನ 2 ಲಕ್ಷ ರೂ., ಪರಿಷ್ಕೃತ ಅನುದಾನ15 ಲಕ್ಷ ರೂಪಾಯಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net