ತುಲಾಭಾರದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ: ಅಭಿಮಾನಿಯ ಆಸೆ ಈಡೇರಿಸಿದ ರೆಡ್ಡಿ

jjjpppprr
Published on

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಅಭಿಮಾನಿಯೊಬ್ಬರು ನಾಣ್ಯದ ತುಲಾಭಾರ ಮಾಡಿದರು.

ಬಳ್ಳಾರಿ ಜಿಲ್ಲೆಯ ಕೃಷ್ಣಾನಗರ ಕ್ಯಾಂಪಿನ ಅಭಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ತುಲಾಭಾರ ಕಾರ್ಯಕ್ರಮ ನಡೆಯಿತು. ರೈತ ಆಲಪಾಟಿ ಶ್ರೀನಿವಾಸ ಎಂಬುವವರು ಲೋಕ ಕಲ್ಯಾಣಾರ್ಥ ಗಣಪತಿ ಹೋಮ ಮತ್ತು ತುಲಾಭಾರವನ್ನು ಆಯೋಜಿಸಿದ್ದರು. ಹೋಮದಲ್ಲಿ ಭಾಗಿಯಾದ ರೆಡ್ಡಿ ದಂಪತಿ, ನಂತರ ಅಭಿಮಾನಿಯ ಆಸೆಯಂತೆ ನಾಣ್ಯದ ತುಲಾಭಾರದಲ್ಲಿ ಕುಳಿತುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net