ದೊಡ್ಡಣ್ಣ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು, ನಾನು ಆರಾಮಾಗಿದ್ದೇನೆ ಎಂದ ಹಿರಿಯ ನಟ

news-21-doddanna
Published on

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಆರೋಗ್ಯವಾಗಿದ್ದಾರೆ. ಅಭಿಮಾನಿಗಳು ಸುಳ್ಳು ಸುದ್ದಿಗೆ ಕಿವಿಗೊಡುವ ಅಗತ್ಯವಿಲ್ಲ.

ಹಿರಿಯ ನಟ ದೊಡ್ಡಣ್ಣ ಇನ್ನಿಲ್ಲ ಎಂಬ ಸುಳ್ಳು ಸುದ್ದಿಯನ್ನು ಕಿಡಿಗೇಡಿಗಳು ಹಬ್ಬಿಸಿದ್ದರು. ಇದರ ಬೆನ್ನಲ್ಲೇ 'ದಿಗ್ವಿಜಯ' ಸುದ್ದಿ ವಾಹಿನಿ ಜತೆ ಮಾತನಾಡಿದ ದೊಡ್ಡಣ್ಣ, 'ನಾನು ಆರಾಮಾಗಿ ಇದ್ದೇನೆ. ನನಗೆ ಏನೂ ಆಗಿಲ್ಲ. ಅಭಿಮಾನಿಗಳು ಆತಂಕಪಡಬೇಡಿ' ಎಂದರು.

ಈ ಕುರಿತು ಮಾತನಾಡಿದ ಡಿಂಗ್ರಿ ನಾಗರಾಜ್, 'ದೊಡ್ಡಣ್ಣ ಕುರಿತು ​ಊಹಾಪೋಹ ಹಬ್ಬಿದೆ. ಇದೆಲ್ಲವೂ ಸುಳ್ಳು ಸುದ್ದಿ, ದೊಡ್ಡಣ್ಣ ಚೆನ್ನಾಗಿದ್ದಾರೆ. ಅವರಿಗೆ ದೇವರು ಆರೋಗ್ಯ-ಆಯಸ್ಸು ಕೊಡಲಿ' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net