More

    ವಿಚ್ಛೇದನಕ್ಕಾಗಿ ನಗ್ನ ಫೋಟೋ ಇಟ್ಟುಕೊಂಡು ಪತ್ನಿಗೆ ಗಂಡ ಕೊಟ್ಟ ಕಾಟ ಅಷ್ಟಿಷ್ಟಲ್ಲ!

    ಬೆಂಗಳೂರು: ಇಲ್ಲೊಬ್ಬ ಭೂಪ, ವಿಚ್ಛೇದನಕ್ಕಾಗಿ ಪತ್ನಿಯ ನಗ್ನ ಫೋಟೋ ಇಟ್ಟುಕೊಂಡು ಆಕೆಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ. ಮನನೊಂದ ಪತ್ನಿ, ಗಂಡನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

    ಲಕ್ಕಸಂದ್ರದ ನಿವಾಸಿ 26 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇರೆಗೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಉದ್ಯಮಿ ಹನುಮಂತನಗರದ ನಿವಾಸಿ ಪ್ರಗತ್​ ಪುರುಷೋತ್ತಮ್​ (32) ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. 2015ರಲ್ಲಿ ಮಹಿಳೆ ಜತೆ ಪ್ರಗತ್​ ವಿವಾಹವಾಗಿದ್ದ.

    ವಿವಾಹವಾಗುವ ವೇಳೆ ಅರ್ಧ ಕೆ.ಜಿ. ಚಿನ್ನಾಭರಣ, 15 ಕೆ.ಜಿ. ಬೆಳ್ಳಿ ಸೇರಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ವರದಕ್ಷಿಣೆಯಾಗಿ ಪಡೆದಿದ್ದ. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ವರದಣೆ ತರುವಂತೆ ಆರೋಪಿ ಪ್ರಗತ್​ ಪೀಡಿಸುತ್ತಿದ್ದ. ಈ ವಿಚಾರ ಮಹಿಳೆಯ ಪಾಲಕರಿಗೆ ತಿಳಿದು, ಅವರು ಮತ್ತೆ 40 ಲಕ್ಷ ರೂ. ವರದಕ್ಷಿಣೆ ಕೊಟ್ಟಿದ್ದರು. ಇಷ್ಟಕ್ಕೆ ಸುಮ್ಮನಾಗದ ಪ್ರಗತ್​, ಮದ್ಯಪಾನ ಮಾಡಿಕೊಂಡು ಬಂದು ಬಲವಂತವಾಗಿ ಪತ್ನಿಯ ನಗ್ನ ಫೋಟೊಗಳನ್ನು ಆಗಾಗ ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ. ಈ ವಿಚಾರವನ್ನು ಬೇರೆ ಯಾರಿಗಾದರೂ ತಿಳಿಸಿದರೆ, ಜೀವಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿದ್ದ.

    ‘ತವರುಮನೆಯಿಂದ ನಿನ್ನ ತಂದೆಯ ಅರ್ಧ ಆಸ್ತಿಯನ್ನು ವರದಕ್ಷಿಣೆ ರೂಪದಲ್ಲಿ ತನ್ನ ಹೆಸರಿಗೆ ಬರೆಸಬೇಕು. ನಂತರ ವಿಚ್ಛೇದನ ಕೊಡಬೇಕು. ಇಲ್ಲದಿದ್ದರೆ ನಗ್ನ ಫೋಟೊಗಳನ್ನು ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುತ್ತೇನೆ’ ಎಂದು ಪತ್ನಿಗೆ ಧಮಕಿ ಹಾಕಿದ್ದ. ಇದರಿಂದ ಆತಂಕಗೊಂಡ ಪತ್ನಿ ನ್ಯಾಯಕ್ಕಾಗಿ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ.

    ತಾಯ್ನಾಡಿನ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಭೂಮಿಗೆ ಇಳಿದ ಯೂಕ್ರೇನ್​ನ ಬ್ಯೂಟಿ ಕ್ವೀನ್​!

    ನಮ್​ ದೇಶಕ್ಕೆ ಯಾಕ್​ ಬಂದ್ರಿ… ರೈಫಲ್​ ಹಿಡಿದ ಸೈನಿಕನಿಗೆ ರಸ್ತೆಯಲ್ಲೇ ಪುಟ್ಟ ಬಾಲಕಿ ಆವಾಜ್! ಮನಕಲಕುತ್ತೆ ಈ ದೃಶ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts