

ತುಮಕೂರು: ಕರೊನಾ ವ್ಯಾಕ್ಸಿನ್ ತೆಗೆದುಕೊಳ್ಳುವಿಕೆ ಹೆಚ್ಚಾದಂತೆ ರಾಜ್ಯದಲ್ಲಿ ತಾತ್ಕಾಲಿಕವಾಗಿ 'ರಕ್ತಕ್ಷಾಮ' ಹೆಚ್ಚಾಗಲಿದೆಯಾ? ಎಂಬ ಪ್ರಶ್ನೆ ದಟ್ಟವಾಗಿದೆ ಕಾಡುತ್ತಿದೆ.
ಕರೊನಾ ವ್ಯಾಕ್ಸಿನ್ ಪಡೆದವರು 6 ವಾರ ರಕ್ತದಾನ ಮಾಡುವಂತಿಲ್ಲ. ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲ ವಯಸ್ಸಿನವರಿಗೂ ಲಸಿಕೆ ಹಾಕಲು ತೀರ್ಮಾನಿಸಿದೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕ್ಷೀಣಿಸಿದೆ. ತುರ್ತು ಅಗತ್ಯ ಇರೋರಿಗೆ ಬ್ಲಡ್ ನೀಡಲು ಸಾಧ್ಯವಾಗ್ತಿಲ್ಲ ಎಂಬ ಮಾತು ಕೇಳಿಬಂದಿದೆ.
ಒಂದಡೆ ಲಾಕ್ಡೌನ್ನಿಂದ ಜನ ಹೊರಗೆ ಬರ್ತಿಲ್ಲ. ಅಲ್ಲದೆ, ಕರೊನಾ ಸೋಂಕು ಹರಡುವ ಭೀತಿಯಲ್ಲಿ ಕೆಲವರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ರಕ್ತ ದಾಸ್ತಾನು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಈಗಾಗಲೇ ತುಮಕೂರಲ್ಲಿ ರಕ್ತದ ಕೊರತೆ ಕಾಣಿಸಿಕೊಂಡಿದೆ. ತುರ್ತು ಚಿಕಿತ್ಸೆ ಅಗತ್ಯವಿರುವರಿಗೆ ಸಂಕಷ್ಟ ಎದುರಾಗಲಿದೆ ಎಂದು ಮೂಲಗಳು ತಿಳಿಸಿವೆ. ಕೂಡಲೇ ಸರ್ಕಾರ ಮತ್ತು ಸಂಬಂಧಪಟ್ಟವರು ಜನರಲ್ಲಿ ರಕ್ತದಾನದ ಅರಿವು ಮೂಡಿಸಬೇಕಿದೆ.