

ಬೆಂಗಳೂರು: ಬಾಲಿವುಡ್ನಂತೆ ಸ್ಯಾಂಡಲ್ವುಡ್ ಅನ್ನೂ ಮಹಾಮಾರಿ ಕರೊನಾ ಬೆಂಬಿಡದೆ ಕಾಡುತ್ತಿದೆ. ಇದೀಗ ಲವ್ ಮಾಕ್ಟೈಲ್ ಜೋಡಿಗೂ ಕರೊನಾ ಸೋಂಕು ತಗುಲಿದೆ.
ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಅವರಿಗೆ ಕರೊನಾ ಪಾಸಿಟಿವ್ ಬಂದಿದೆ. ಈ ಬಗ್ಗೆ ನಟ ಕೃಷ್ಣ ಅವರೇ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ನನಗೆ ಮತ್ತು ನನ್ನ ಪತ್ನಿ ಮಿಲನಾಗೆ ಕರೊನಾ ಸೋಂಕು ತಗುಲಿದೆ. ಇತ್ತೀಚಿಗೆ ಯಾರೆಲ್ಲ ನಮ್ಮ ಸಂಪರ್ಕದಲ್ಲಿದ್ದರೋ ಅವರೆಲ್ಲರೂ ದಯವಿಟ್ಟು ಕರೊನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.