

ನವದೆಹಲಿ: ಮನರಂಜನಾ ಮತ್ತು ಬುದ್ಧಿವಂತಿಕೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವವರಿಗೆ ಆಪ್ಟಿಕಲ್ ಭ್ರಮೆಗಳು ಅತ್ಯುತ್ತಮ ಆಯ್ಕೆಯಾಗಿವೆ. ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಕಾಣ ಸಿಗುತ್ತವೆ.
ಆಟದ ಜೊತೆಗೆ, ಈ ಚಿತ್ರ ಆಧಾರಿತ ಒಗಟುಗಳು ನಿಮ್ಮ ಮೆದುಳಿಗೆ ಉತ್ತಮ ವ್ಯಾಯಾಮವಾಗಿದೆ. ಅಂತಹ ಒಂದು ಒಗಟು ಅಂತರ್ಜಾಲದಲ್ಲಿ ಕಾಣಿಸಿಕೊಂಡಿದೆ. ಕ್ರಮಬದ್ಧವಾದ ಶೈಲಿಯಲ್ಲಿ ಅನೇಕ ಬಾರಿ 208 ಬರೆಯಲಾದ ಚಿತ್ರವನ್ನು ತೋರಿಸಲಾಗಿದೆ. ಕೇವಲ ಐದು ಸೆಕೆಂಡುಗಳಲ್ಲಿ ಗುಂಪಿನಲ್ಲಿ ವಿಭಿನ್ನ ಸಂಖ್ಯೆಯನ್ನು ಕಂಡುಹಿಡಿಯುವುದು ವೀಕ್ಷಕರ ಗುರಿಯಾಗಿದೆ. ಇದರಲ್ಲಿ 208 ಸಂಖ್ಯೆಯನ್ನು ಅನೇಕ ಬಾರಿ ಬರೆಯಲಾಗಿದೆ. ಆದರೆ ಅದರಲ್ಲಿ ಎರಡು ಸಂಖ್ಯೆಯು ಉಳಿದವುಗಳಿಗಿಂತ ಭಿನ್ನವಾಗಿದೆ. ಅದನ್ನು ನೀವು ನೀವು ಸೂಕ್ಷ್ಮವಾಗಿ ಗಮನಿಸಿದರೆ ಖಂಡಿತವಾಗಿಯೂ ಸಿಗುತ್ತದೆ.
ಇದನ್ನೂ ಓದಿ: ಪಾರಿವಾಳಗಳಿಗೆ ಆಹಾರ ಹಾಕಿದರೆ 500 ರೂ. ದಂಡ..!
ಚಿತ್ರದಲ್ಲಿ ಮರೆಮಾಡಲಾಗಿರುವ ಉಳಿದ ಸಂಖ್ಯೆಗಳಿಗಿಂತ ಭಿನ್ನವಾದ ಸಂಖ್ಯೆ 280. ಚಿತ್ರವನ್ನು ಕ್ರಮಬದ್ಧವಾಗಿ ಸ್ಕ್ಯಾನ್ ಮಾಡಿದರೆ ಮತ್ತು ಯಾವುದೇ ಸಂಖ್ಯೆಗಳನ್ನು ಬಿಟ್ಟುಬಿಡದೇ ನೋಡಿದರೆ ಭಿನ್ನ ಸಂಖ್ಯೆಗಳನ್ನು ಗುರುತಿಸಬಹುದು. ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ.