ಮೇವು ಹಗರಣದ 5ನೇ ಪ್ರಕರಣ: ಲಾಲು​ಗೆ 5 ವರ್ಷ ಜೈಲು ಶಿಕ್ಷೆ, 60 ಲಕ್ಷ ರೂ. ದಂಡ

lalu prasad
Published on

ರಾಂಚಿ: ಬಹುಕೋಟಿ ಮೇವು ಹಗರಣದ 5ನೇ ಪ್ರಕರಣದಲ್ಲಿ ಬಿಹಾರ ಮಾಜಿ ಸಿಎಂ, ಆರ್​ಜೆಡಿ ಸಂಸ್ಥಾಪಕ ಲಾಲು​ ಪ್ರಸಾದ್​ ಯಾದವ್​ಗೆ 5 ವರ್ಷ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.

ಈಗಾಗಲೇ ಮೇವು ಹಗರಣದ 4 ಪ್ರಕರಣದಲ್ಲೂ ಲಾಲು ದೋಷಿ ಆಗಿದ್ದು, ಈಗಾಗಲೇ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 5ನೇ ಪ್ರಕರಣದಲ್ಲೂ ಲಾಲು ಅವರನ್ನ ದೋಷಿ ಎಂದು ಫೆ.15ರಂದು ನ್ಯಾಯಾಧೀಶ ಎಸ್​.ಕೆ. ಶಶಿ ಘೋಷಿಸಿ ಶಿಕ್ಷೆ ಪ್ರಮಾಣ ಪ್ರಕಟವನ್ನ ಕಾಯ್ದಿರಿಸಿದ್ದರು. ಇಂದು(ಫೆ.21) ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದೆ.

5ನೇ ಪ್ರಕರಣ: ಅವಿಭಜಿತ ಬಿಹಾರದಲ್ಲಿ 950 ಕೋಟಿ ಮೇವು ಹಗರಣ ನಡೆದಿತ್ತು. ವಿವಿಧ ಜಿಲ್ಲೆಗಳ ಸರ್ಕಾರಿ ಖಜಾನೆಯಿಂದ ಹಣವನ್ನು ಅಕ್ರಮವಾಗಿ ಪಡೆಯಲಾಗಿತ್ತು. ಡೊರಾಂಡಾ ಜಿಲ್ಲಾ ಸರ್ಕಾರಿ ಖಜಾನೆಯಿಂದ 139.35 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಪಡೆದ ಆರೋಪ ಲಾಲು ಮೇಲೆ ಬಂದಿತ್ತು. ಇದು ಮೇವು ಹಗರಣದ 5ನೇ ಪ್ರಕರಣ. ತನಿಖೆ ಬಳಿಕ ಆರೋಪ ಸಾಬೀತಾಗಿದ್ದು, ಈ ಪ್ರಕರಣ ಸಂಬಂಧ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಲಾಲು ಯಾದವ್​ ಮತ್ತು ಇತರ 75 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದೆ. 6 ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಮಹಿಳೆಯರು ಸೇರದಂತೆ 24 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

1991 ಮತ್ತು 1996ರ ನಡುವೆ ಲಾಲು ಯಾದವ್​ ಸಿಎಂ ಆಗಿದ್ದಾಗ ಬಿಹಾರ ಪಶುಸಂಗೋಪನೆ ಇಲಾಖೆಯಿಂದ ಈಗಾಗಲೇ ಮೂರಾಊವರೆ ವರ್ಷ ನ್ಯಾಯಾಂಗ ಬಂಧನದಲ್ಲೇ ಕಾಲ ಕಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net