More

    ಕಂಡ ಕಂಡವರ ಮೊಬೈಲ್​ಗೆ ಹಗಲು-ರಾತ್ರಿ ಎನ್ನದೆ ಬೆತ್ತಲೆ ಫೋಟೋ ಕಳಿಸಿ ಖುಷಿ ಪಡ್ತಿದ್ದ… ಈತ ಕೊಟ್ಟ ಕಾಟ ಅಷ್ಟಿಷ್ಟಲ್ಲ

    ಬೆಂಗಳೂರು: ವಿಕೃತ ಕಾಮಿಯೊಬ್ಬ ಪರಿಚಯವಿಲ್ಲದ ಮಹಿಳೆಯರಿಗೆ ಅಶ್ಲೀಲ ಫೋಟೋ-ವಿಡಿಯೋ ಕಳುಹಿಸಿ ಹಿಂಸಿಸುತ್ತಿದ್ದ… ಹಗಲು-ರಾತ್ರಿ ಎನ್ನದೆ ತನ್ನ ಬೆತ್ತಲೆ ಫೋಟೋವನ್ನೂ ಕಳಿಸಿ ಖುಷಿ ಪಡ್ತಿದ್ದ… ವಿಕೃತ ಕಾಮಿಯನ್ನ ಆಗ್ನೇಯ ವಿಭಾಗ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

    ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ನಿವಾಸಿ ಹರೀಶ್​ (27) ಬಂಧಿತ. ಜೆಸಿಬಿ ಚಾಲಕನಾಗಿದ್ದ ಹರೀಶ್​, ಫೇಸ್​ಬುಕ್​ ಮತ್ತು ಟ್ವಿಟರ್​ನಲ್ಲಿ ಮಹಿಳೆಯರ ಖಾತೆಗಳನ್ನು ಹುಡುಕಿ ಫ್ರೆಂಡ್​ಶಿಪ್​ ಸಂದೇಶ ಕಳುಹಿಸುತ್ತಿದ್ದ. ಏನಾದರೂ ಆ ಕಡೆಯಿಂದ ಸಂದೇಶ ಬಂದರೆ ಸಾಕು ಅವರೊಂದಿಗೆ ವಾಟ್ಸ್​ಆ್ಯಪ್​ನಲ್ಲಿ ಚಾಟ್​ ಶುರು ಮಾಡಿದ್ದ. ಯಾವುದಾದರು ಮಹಿಳೆಯರ ಮೊಬೈಲ್​ ನಂಬರ್ ಸಿಕ್ಕರೆ ಸಾಕು ಅವರಿಗೂ ವಾಟ್ಸ್ಆ್ಯಪ್​ ಕಾಲ್​ ಮಾಡುತ್ತಿದ್ದ. ವಾಟ್ಸ್​ಆ್ಯಪ್​ ಮತ್ತು ಮೇಸೆಂಜರ್​ನಲ್ಲಿ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದ. ಕೆಲವರಿಗೆ ತನ್ನ ಬೆತ್ತಲೆ ಫೋಟೋಗಳನ್ನು ಕಳುಹಿಸಿ ವಿಕೃತಿ ಮೆರೆಯುತ್ತಿದ್ದ.

    ಕಳೆದ 3 ತಿಂಗಳಿನಿಂದ ಹಗಲು-ರಾತ್ರಿ ಎನ್ನದೆ ಬಿಳೆಕಳ್ಳಿ ಮಹಿಳೆಯ ಮೊಬೈಲ್​ಗೆ ಹರೀಶ್​ ವಾಟ್ಸ್​ಆ್ಯಪ್​ ಕಾಲ್​ ಮಾಡುತ್ತಿದ್ದ. ಕರೆ ಸ್ವೀಕರಿಸದಿದ್ದರೆ ಅಶ್ಲೀಲ ಫೋಟೋವನ್ನು ಕಳುಹಿಸಿ ಕಿರುಕುಳ ಕೊಡುತ್ತಿದ್ದ. ನೊಂದ ಮಹಿಳೆ, ತನ್ನ ಪತಿಗೆ ವಿಷಯ ತಿಳಿಸಿದ್ದಳು. ಈ ಕುರಿತು ಸಂತ್ರಸ್ತೆ ಪತಿ ಫೆ.16ರಂದು ಆಗ್ನೇಯ ವಿಭಾಗ ಸಿಇಎನ್​ ಠಾಣೆಗೆ ದೂರು ನೀಡಿದ್ದರು.

    ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಎಸಿಪಿ ಸುಧೀರ್​ ಎಂ. ಹೆಗಡೆ ಮತ್ತು ಇನ್​ಸ್ಪೆಕ್ಟರ್​ ಎಸ್​.ಟಿ. ಯೋಗೇಶ್​ ನೇತೃತ್ವದ ತಂಡ ಆರೋಪಿ ಮೊಬೈಲ್​ ನಂಬರ್​ನ ಸಿಡಿಆರ್​ ಮಾಹಿತಿಯನ್ನು ಆಧರಿಸಿ ಬಂಧಿಸಿದೆ. ಇದೇ ರೀತಿ 10ಕ್ಕೂ ಅಧಿಕ ಮಹಿಳೆಯರಿಗೆ ಕಿರುಕುಳ ಕೊಟ್ಟಿರುವುದು ಬೆಳಕಿಗೆ ಬಂಧಿದೆ ಎಂದು ಡಿಸಿಪಿ ಶ್ರೀನಾಥ್​ ಜೋಶಿ ಮಾಹಿತಿ ನೀಡಿದ್ದಾರೆ.
    ವಿಕೃತ ಮನಸ್ಸಿನ ಹರೀಶ್​ ಮಹಿಳೆಯರಿಗೆ ಅಶ್ಲೀಲ ವಿಡಿಯೋ, ಪೋಟೋಗಳನ್ನು ಕಳುಹಿಸಿ ಖುಷಿ ಪಡುತ್ತಿದ್ದ. ಸಂತ್ರಸ್ತ ಮಹಿಳೆಯರು ಯಾರು ಸಹ ಈತನಿಗೆ ಪರಿಚಯ ಇರಲಿಲ್ಲ ಎಂದು ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್​ ಎಂ.ಜೋಷಿ ತಿಳಿಸಿದ್ದಾರೆ.

    ಥೂ ಇದೆಂಥಾ ಅಸಹ್ಯ? ಅಣ್ಣ-ತಂಗಿ ನಡುವೆಯೇ ಅಕ್ರಮ ಸಂಬಂಧ, ಅಡ್ಡಿಬಂದ ತಾಯಿಯನ್ನೇ ಕೊಂದ ಕಾಮುಕರು!

    ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts