ಮೈಸೂರಲ್ಲಿ ಸರ್ಕಾರಿ ನಿವೃತ್ತ ನೌಕರ ಸಜೀವ ದಹನ: ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ?

New Project(9)
Published on

ಮೈಸೂರು: ಸರ್ಕಾರಿ ನಿವೃತ್ತ ನೌಕರರೊಬ್ಬರು ಕಾರಿನಲ್ಲೇ ಸಜೀವ ದಹನಗೊಂಡ ಘಟನೆ ಮೈಸೂರಿನ ಬಾಪೂಜಿ ನಗರದಲ್ಲಿ ಸಂಭವಿಸಿದೆ.

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಶಿವಣ್ಣ(60) ಮೃತ ದುರ್ದೈವಿ ನಿವೃತ್ತಿಯಾದ ಬಳಿಕ ಮನೆಯಲ್ಲಿ ಶಿವಣ್ಣ ಒಬ್ಬರೇ ಇದ್ದರು. ಇಂದು(ಶುಕ್ರವಾರ) ಊರಿನಿಂದ ತನ್ನ ಆಲ್ಟೋ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಬಂದಿದ್ದರು. ಬಾಪೂಜಿನಗದ ಹರಿವಿದ್ಯಾಲಯ ಹಿಂಭಾಗ ಹಾಡಹಗಲೇ ಕಾರು ಹೊತ್ತಿ ಉರಿದಿದ್ದು, ಕಾರಿನೊಳಗೇ ಶಿವಣ್ಣ ಸುಟ್ಟು ಕರಕಲಾಗಿದ್ದಾರೆ.

ಅನಾರೋಗ್ಯ ಹಿನ್ನೆಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ. ಕಿಡ್ನಿ, ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಶಿವಣ್ಣ, ಸಾವಿನ ಮನೆಯ ಕದ ತಟ್ಟಿದ್ದಾರೆ ಎನ್ನಲಾಗಿದೆ. ತನಿಖೆ ಬಳಿಕ ಸತ್ಯಾಸತ್ಯತೆ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಸರಸ್ವತಿ ಪುರಂ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net