ತುಂಗಭದ್ರಾ ನದಿ ನೀರಲ್ಲಿ ಕೊಚ್ಚಿಕೊಂಡು ಹೋದ ಅರ್ಚಕ, ಕುಟುಂಬಸ್ಥರಲ್ಲಿ ಮಡುಗಟ್ಟಿದ ಆತಂಕ

New Project(6)
Published on

ರಾಯಚೂರು: ತುಂಗಭದ್ರಾ ನದಿ ನೀರಲ್ಲಿ ಸ್ನಾನ ಮಾಡಲು ಹೋದ ದೇವಸ್ಥಾನದ ಅರ್ಚಕರೊಬ್ಬರು ಕೊಚ್ಚಿಕೊಂಡು ಹೋಗಿದ್ದು, ಎನ್​ಡಿಆರ್​ಎಫ್​ ತಂಡದಿಂದ ಶೋಧ ಕಾರ್ಯ ನಡೆಯುತ್ತಿದೆ.

ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ಸಂಭವಿಸಿದೆ. ಮುಕ್ಕುಂದ ಗ್ರಾಮದ ಲಿಂಗಪ್ಪ(50) ನದಿ ನೀರಲ್ಲಿ ಕೊಚ್ಚಿಕೊಂಡು ಹೋದವರು. ಗ್ರಾಮದ ಕರಿವಿರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಲಿಂಗಪ್ಪ ಎಂದಿನಂತೆ ನದಿ ನೀರಲ್ಲಿ ಸ್ನಾನ ಮಾಡಲು ಬೆಳಗ್ಗೆ ತೆರಳಿದ್ದರು.

ಎಷ್ಟೊತ್ತಾದರೂ ಬಾರದಿದ್ದಾಗ ಅನುಮಾನಗೊಂಡು ಕುಟುಂಬಸ್ಥರು ಸ್ಥಳಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕುಟುಂಬಸ್ಥರಲ್ಲಿ ಆತಂಕ ಮಡುಗಟ್ಟಿದೆ.

ಸ್ನಾನ ಮಾಡೋಕು ಮುನ್ನ ನದಿ ತೀರದಲ್ಲಿ ಬಿಟ್ಟಿದ್ದ ಪಾದರಕ್ಷೆಗಳು ಅಲ್ಲೇ ಇವೆ. ಮುಂಗಾರು ಮಳೆ ಜೋರಾಗಿದ್ದು ಒಳ ಹರಿವು-ಒಳ ಹರಿವು ಹೆಚ್ಚಾಗಿದೆ. ಪ್ರವಾಹ ಭೀತಿ ಎದುರಾಗಿದೆ. ಸ್ನಾನ ಮಾಡುವಾಗ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಲಿಂಗಪ್ಪರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net