

ಬೆಳಗಾವಿ: ಊರೆಲ್ಲ ಜಾತ್ರೆಯ ಸಂಭ್ರಮದಲ್ಲಿರುವಾಗ ಒಂದು ಮನೆಯಲ್ಲಿ ಮಾತ್ರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಜಗಳದಲ್ಲಿ ತಾಯಿ ಮಗನ ಜತೆ ಸೇರಿ ಪತಿಯನ್ನೇ ಮುಗಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರು ಗ್ರಾಮದಲ್ಲಿ ನಡೆದಿದೆ.
ಚಂದ್ರಕಾಂತ ಮಾವರಕರ್(42) ಕೊಲೆಯಾದ ದುರ್ದೈವಿ. ಸಾವಿತ್ರಿ ಮಾವರಕರ್, ಸುನೀಲ್ ಮಾವರಕರ್ ಕೊಲೆ ಮಾಡಿದ ತಾಯಿ ಹಾಗೂ ಮಗ. ನಿನ್ನೆ ನಸುಕಿನ ಜಾವ ನಡೆದ ಘಟನೆ ತಡವಾಗಿ ಬೆಳಕಿಗೆ ಈ ಘಟನೆ ನಡೆದಿದೆ.
ಹಳ್ಳೂರು ಗ್ರಾಮದಲ್ಲಿ ದ್ಯಾಮವ್ವ ಹಾಗೂ ಮಹಾಲಕ್ಷ್ಮೀ ದೇವಿ ಜಾತ್ರೆ ನಡೆಯುತ್ತಿತ್ತು. ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಅದ್ದೂರಿ ಜಾತ್ರೆ ಇದಾಗಿದೆ. ಜಾತ್ರೆ ಇದೆ ಎಂದು ದಿನ ಕುಡಿದು ಬರುತ್ತಿದ್ದ ಪತಿ ಚಂದ್ರಕಾಂತ, ಕುಡಿದು ಬಂದು ಪತ್ನಿ ಸಾವಿತ್ರಿ ಜತೆ ಜಗಳ ತಗೆದಿದ್ದಾನೆ. ಈ ವೇಳೆ ಪತ್ನಿ, ಮಗ ಹಾಗೂ ಪತಿಯ ಮಧ್ಯೆ ವಾಗ್ವಾದವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
ಸಾವಿತ್ರಿ ಹಾಗೂ ಸುನೀಲ್ ಕಬ್ಬಿಣದ ರಾಡ್ನಿಂದ ಚಂದ್ರಕಾಂತ ತಲೆಗೆ ಹೊಡೆದಿದ್ದಾರೆ. ಸ್ಥಳೀಯರೆಲ್ಲಾ ಸೇರಿ ಚಂದ್ರಕಾಂತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸಲದೆ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ ಚಂದ್ರಕಾಂತ ಸಾವನ್ನಪ್ಪಿದ್ದಾನೆ.ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.