More

    ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ ಕಾಂಗ್ರೆಸ್ ಸ್ಥಿತಿ; ಸಿ.ಟಿ.ರವಿ

    ಚಿಕ್ಕಮಗಳೂರು: ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯನ್ನು ಕಾಂಗ್ರೆಸ್‍ನವರು 5 ಗ್ಯಾರಂಟಿಗಳನ್ನು ಘೋಷಿಸಿದ್ದರು. ಆದರೆ, ಚುನಾವಣೆ ಮುಗಿದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇಷ್ಟು ದಿನವಾದರೂ ಯಾವುದೇ ಗ್ಯಾಂಟಿಗಳನ್ನು ಜಾರಿಗೆ ತಂದಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿನಿತ್ಯ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್​​ ಗ್ಯಾರಂಟಿ ಕುರಿತಾಗಿ ಬಿಜೆಪಿ ಕಿಡಿಕಾರುತ್ತಿದೆ.

    ಹೇ ಮಾದೇವಪ್ಪ… ನಿಂಗೂ ಫ್ರೀ… ನಂಗೂ ಫ್ರೀ ಅಂದಿದ್ದರು. ಈಗ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ ಕಾಂಗ್ರೆಸ್ ಸ್ಥಿತಿ ಎಂದು ಚಿಕ್ಕಮಗಳೂರಿನಲ್ಲಿ ಮಾಜಿ‌ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

    ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮ್ಮ ಗ್ಯಾರೆಂಟಿ ಯೋಜನೆಗಳನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಮುನ್ನ ಜಾರಿ ಮಾಡಿ. ಈಗ ಕಾಂಗ್ರೆಸ್ ಪಕ್ಷ ನೆಪ ಹುಡುಕುತ್ತಿದೆ, ಏಕೆ ಹುಡುಕಬೇಕು? ಮಾಡ್ತೀವಿ ಅಂತಾ ಹೇಳಿದ್ದೀರಾ… ಜನರನ್ನ ನಂಬಿಸಿದ್ದೀರಾ… ಕೊಟ್ಟ ಮಾತು ಉಳಿಸಿಕೊಳ್ಳಿ ಮೊದಲು ಕಂಡಿಷನ್ ಹಾಕಿರಲಿಲ್ಲ, ಎಲ್ಲರಿಗೂ ಎಲ್ಲಾ‌‌‌ ಫ್ರೀ ಎಂದಿದ್ದರು ಎಂದು ಕಿಡಿಕಾರಿದ್ದಾರೆ.

    ಇದನ್ನೂ ಓದಿ: ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​; ಆಟೋದಲ್ಲಿ ಪ್ರಯಾಣಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಗರ್ಭಿಣಿ

    ಸಂಪುಟ ವಿಸ್ತರಣೆಯೂ ಆಯ್ತು, ಖಾತೆ ಹಂಚಿಕೆಯೂ ಆಯ್ತು, ಇನ್ಯಾಕೆ ತಡ? ಅಂದು ಯೋಜನೆ ಘೋಷಣೆ ಮಾಡುವಾಗ ನಿರ್ಬಂಧ ಇರಲಿಲ್ಲ, ಈಗ ಏಕೆ ಕಾರಣ ಹುಡುಕ್ತಿದ್ದೀರಾ? ಗ್ಯಾರೆಂಟಿ ಯೋಜನೆಗಳನ್ನು ತಕ್ಷಣ ಜಾರಿ ಮಾಡಿ ಎಂದಿದ್ದಾರೆ.

    ರಭಸದ ಗಾಳಿ; 2022ರಲ್ಲಿ ಉದ್ಘಾಟನೆಗೊಂಡ ಸಪ್ತಋಷಿಗಳ ವಿಗ್ರಹ ಧರೆಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts