ಎಐಎಡಿಎಂಕೆ ನಾಯಕ ಪನ್ನೀರಸೆಲ್ವಂ ಪತ್ನಿ ನಿಧನ

AIADMK leader Panneerselvams wife Vijayalakshmi
Published on

ಚೆನ್ನೈ: ತಮಿಳುನಾಡಿನ ಎಐಎಡಿಎಂಕೆ ನಾಯಕ ಪನ್ನೀರಸೆಲ್ವಂ ಅವರ ಪತ್ನಿ ವಿಜಯಲಕ್ಷ್ಮಿ(66) ನಿಧರಾದರು.

ವಿಜಯಲಕ್ಷ್ಮೀ ಅವರಿಗೆ ಇತ್ತೀಚಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು(ಬುಧವಾರ ಬೆಳಗ್ಗೆ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರು ಪತಿ, ಮೂವರು ಮಕ್ಕಳನ್ನು ಅಗಲಿದ್ದಾರೆ.

'ಅನಾರೋಗ್ಯಿಂದ ಬಳಲುತ್ತಿದ್ದ ವಿಜಯಲಕ್ಷ್ಮಿ ಅವರು ಕಳೆದ 10 ದಿನದ ಹಿಂದೆ ಚೆನ್ನೈ ಜೆಮ್ ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖರಾಗುತ್ತಿದ್ದರು. ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲಿ ಬೆಳಗಿನ ಜಾವ 5ಕ್ಕೆ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದರು' ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಎಐಎಡಿಎಂಕೆ ಸಹ ಸಂಯೋಜಕ ಓ. ಪನ್ನೀರಸೆಲ್ವಂ, ತಮಿಳುನಾಡು ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ. ಪತ್ನಿಯನ್ನು ಕಳೆದುಕೊಂಡ ಪನ್ನೀರಸೆಲ್ವಂಗೆ ಸಿಎಂ ಎಂ.ಕೆ. ಸ್ಟಾಲಿನ್ ಸೇರಿದಂತೆ ಸಚಿವರು ಮತ್ತು ಎಐಎಡಿಎಂಕೆ ಹಿರಿಯ ನಾಯಕರು ಸಂತಾಪ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net