Photos| ದಶಕದ ಬಳಿಕ ಮೈದುಂಬಿ ಹರಿಯುತ್ತಿದೆ ಮೂಡಲ್​ ಕುಣಿಗಲ್​ ಕೆರೆ: ರಮಣೀಯ ದೃಶ್ಯ ಕಣ್ತುಂಬಿಕೊಳ್ಳಿ

kunigal kere
Published on

ದಶಕದ ಬಳಿಕ ಮೂಡಲ್​ ಕುಣಿಗಲ್​ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಐಭೋಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ಕುಣಿಗಲ್​ ಎಂದಾಕ್ಷಣ 'ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ.. ಮೂಡಿ ಬರ್ತಾನೆ ಚಂದಿರಾಮ.. ತಾನಂದನೋ ಮೂಡಿ ಬರ್ತಾನೆ ಚಂದಿರಾಮ..' ಹಾಡು ನೆನಪಾಗುತ್ತೆ. ಈ ಜನಪದ ಗೀತೆಯನ್ನ 'ನನ್ನ ಪ್ರೀತಿಯ ಹುಡುಗಿ' ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ. ಕುಣಿಗಲ್​ ದೊಡ್ಡಕೆರೆ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಜೀವನಾಡಿಯಾಗಿದ್ದು, ಕೆರೆ ಕೋಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಖುಷಿಯಿಂದಲೇ ಬಂದು ನೀರಾಟ ಆಡುತ್ತಾ ಸಂಭ್ರಮಿಸುತ್ತಿದ್ದಾರೆ. ಆ ರಮಣೀಯ ದೃಶ್ಯ ಛಾಯಾಗ್ರಾಹಕ ಸುಪ್ರಿತ್​ ಕುಣಿಗಲ್​ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ...

New Project (1)
New Project
New Project (5)
New Project (7)

ದಶಕದ ಬಳಿಕ ಮೂಡಲ್​ ಕುಣಿಗಲ್​ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಐಭೋಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ಕುಣಿಗಲ್​ ಎಂದಾಕ್ಷಣ 'ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ.. ಮೂಡಿ ಬರ್ತಾನೆ ಚಂದಿರಾಮ.. ತಾನಂದನೋ ಮೂಡಿ ಬರ್ತಾನೆ ಚಂದಿರಾಮ..' ಹಾಡು ನೆನಪಾಗುತ್ತೆ. ಈ ಜನಪದ ಗೀತೆಯನ್ನ 'ನನ್ನ ಪ್ರೀತಿಯ ಹುಡುಗಿ' ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ. ಕುಣಿಗಲ್​ ದೊಡ್ಡಕೆರೆ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಜೀವನಾಡಿಯಾಗಿದ್ದು, ಕೆರೆ ಕೋಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಖುಷಿಯಿಂದಲೇ ಬಂದು ನೀರಾಟ ಆಡುತ್ತಾ ಸಂಭ್ರಮಿಸುತ್ತಿದ್ದಾರೆ. ಆ ರಮಣೀಯ ದೃಶ್ಯ ಛಾಯಾಗ್ರಾಹಕ ಸುಪ್ರಿತ್​ ಕುಣಿಗಲ್​ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net