ಟಿ-ಶರ್ಟ್​ ಮೇಲೆ ಮುದ್ರಿಸಿದ ಒಂದು 'ಸ್ಲೋಗನ್'​​ನಿಂದ ಹೈರಾಣಾಗುತ್ತಿರುವ ಯುವ ಉದ್ಯಮಿ...

T Shirt
Published on

ತಿರುಪುರ್​: 'ಉಡುಪು ತಯಾರಿಕಾ ಉದ್ಯಮ ನಡೆಸುತ್ತಿರುವ 35 ವರ್ಷದ ಯುವಕನಿಗೆ ಕಳೆದ ಕೆಲವು ದಿನಗಳಿಂದ ವಿಪರೀತ ಬೆದರಿಕೆ ಕರೆಗಳು ಬರುತ್ತಿವೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ಇವರ ಹೆಸರು ಬಿ.ಕಾರ್ತಿಕೇಯನ್​. ಕಳೆದ ಐದು ವರ್ಷಗಳಿಂದಲೂ ತಿರುಪುರದ ವೀರಪಂಡಿಯಲ್ಲಿ ಉಡುಪು ಉದ್ಯಮ ನಡೆಸುತ್ತಿದ್ದಾರೆ.

ನಾನು ಈವೆಂಟ್​ ಮ್ಯಾನೇಜ್​ಮೆಂಟ್​ ಕಂಪನಿಗಳಿಗಾಗಿ ಟಿ-ಶರ್ಟ್​​ಗಳನ್ನು ತಯಾರಿಸಿ ಕೊಡುತ್ತೇನೆ. ಕಾರ್ಪೋರೇಟ್​ ಕಂಪನಿಗಳಿಂದಲೂ ಕೂಡ ಆರ್ಡರ್​ ಬರುತ್ತವೆ. ಹಾಗೇ ಕಳೆದವಾರ ತೂತುಕುಡಿ ಎಂಪಿ ಕನಿಮೋಳಿ ಕಚೇರಿಯಿಂದ ಟಿ-ಶರ್ಟ್​ಗೆ ಆರ್ಡರ್​ ಬಂತು. ಹಾಗೇ ಅದರ ಮೇಲೆ ಬರೆಸಬೇಕಾದ ಸ್ಲೋಗನ್​ ಕೂಡ ನೀಡಿದ್ದರು. ಅದು ' ನಾನು ತಮಿಳು ಮಾತನಾಡುವ ಭಾರತೀಯ' ನನಗೆ ಹಿಂದಿ ಗೊತ್ತಿಲ್ಲ..ಹೋಗು..' (I am a Tamil Pesum Indian' 'Hindi Theriyathu Poda' ) ಎಂಬುದು ಸ್ಲೋಗನ್​ ಆಗಿತ್ತು. ನನಗೂ ತುಂಬ ಇಷ್ಟವಾಯಿತು. ಅವರು ಹೇಳಿದಂತೆ ಟಿ-ಶರ್ಟ್​ ತಯಾರಿಸಿ, ಅದರ ಮೇಲೆ ಸ್ಲೋಗನ್​​ನ್ನು ಸುಂದರವಾಗಿ ಮುದ್ರಿಸಿದ್ದೆವು. ಆದರೆ ಅದಾದ ಬಳಿಕ ನನಗೆ ತುಂಬ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಾರ್ತಿಕೇಯನ್​ ವಿವರಿಸಿದ್ದಾರೆ.

ಆ ಟಿ-ಶರ್ಟ್​ ನೋಡಿದ ನನ್ನ ಸ್ನೇಹಿತರು, ಸಂಬಂಧಿಕರು ನನ್ನನ್ನು ಹೊಗಳಿದರು. ಹೆಚ್ಚೆಚ್ಚು ಆರ್ಡರ್​ ಪಡೆಯುವ ದೃಷ್ಟಿಯಿಂದ ಟಿ-ಶರ್ಟ್​ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ನನ್ನ ಫೋನ್​ ನಂಬರ್​ ಕೂಡ ನಮೂದಿಸಿದ್ದೆ. ಅದನ್ನು ನೋಡಿ ಅನೇಕರು ಆರ್ಡರ್​ ಕೊಟ್ಟಿದ್ದಾರೆ. ಹಾಗೇ ಬೆದರಿಕೆ ಕರೆಗಳೂ ಬರುತ್ತಿವೆ. ದುಬೈ ಮತ್ತು ಸಿಂಗಪೂರ್​​ದಿಂದ ಕರೆ ಮಾಡಿ ನಿಂದಿಸುತ್ತಿದ್ದಾರೆ. ಇದನ್ನೂ ಓದಿ: ಪಂಜಾಬ್ ತಂಡದಲ್ಲಿ ಕ್ರಿಸ್ ಗೇಲ್‌ಗೆ ಹೊಸ ಜವಾಬ್ದಾರಿ ನೀಡಿದ ಕೋಚ್ ಅನಿಲ್ ಕುಂಬ್ಳೆ

ಮೊದಮೊದಲು ಕರೆ ಸ್ವೀಕರಿಸುತ್ತಿರಲಿಲ್ಲ. ಆದರೆ ಸ್ನೇಹಿತರು ಧೈರ್ಯ ತುಂಬಿದರು. ಕರೆ ಸ್ವೀಕರಿಸುತ್ತೇನೆ. ನಾನು ಭಾಷಾ ಹೇರಿಕೆಯನ್ನು ವಿರೋಧಿಸುವ ಓರ್ವ ಉಡುಪು ತಯಾರಕ ಎಂದು ಧೈರ್ಯವಾಗಿ ಹೇಳುತ್ತಿದ್ದೇನೆ ಎಂದು ಕಾರ್ತಿಕೇಯನ್​ ತಿಳಿಸಿದ್ದಾರೆ.

ಅಷ್ಟೇ ಅಲ್ಲ, ನಾನು ಪೊಲೀಸರಿಗೆ ದೂರು ನೀಡುವುದಿಲ್ಲ. ಏನೇ ಬಂದರೂ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net