More

    ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​

    ಅಂಬಾಟೊ: ಮಕ್ಕಳಿಗೆ ಆನ್​ಲೈನ್​ ತರಗತಿ ನಡೆಯುತ್ತಿರುವಾಗಲೇ ದರೋಡೆಕೋರರು ಬಂದಿರುವ ಘಟನೆ ಈಕ್ವೆಡಾರ್​ ದೇಶದ ಅಂಬಾಟೊ ಎಂಬ ನಗರದಲ್ಲಿ ನಡೆದಿದೆ.
    ಝೂಮ್​ ಆ್ಯಪ್​ನಲ್ಲಿ ಆನ್​ಲೈನ್​ ತರಗತಿ ನಡೆಯುತ್ತಿತ್ತು. ಇಂಗ್ಲಿಷ್​ ತರಗತಿ ಶುರುವಾಗಿತ್ತು. ವಿದ್ಯಾರ್ಥಿಗಳೆಲ್ಲಾ ಶಿಕ್ಷಕರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಅದೇ ವೇಳೆ ವಿದ್ಯಾರ್ಥಿಯೊಬ್ಬಳ ಹಿಂದುಗಡೆ ಯಾರೋ ಬಂದು ತೊಂದರೆ ಕೊಡುತ್ತಿರುವುದು ಆನ್​ಲೈನ್​ ಇರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕಾಣಿಸಿತು.

    ನಂತರ ದರೋಡೆಕೋರರು ಮನೆಯೊಳಕ್ಕೆ ನುಗ್ಗಿದ್ದರು. ಬಾಲಕಿ ಆನ್​ಲೈನ್​ ಕ್ಲಾಸ್​ನಲ್ಲಿ ಇರುವುದನ್ನು ನೋಡಿದ ದರೋಡೆಕೋರರು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದರು. ಯಾರೋ ಬಂದದ್ದನ್ನು ನೋಡಿದ ವಿದ್ಯಾರ್ಥಿನಿ ಹಿಂದಕ್ಕೆ ತಿರುಗಿ ಬೆದರಿ ಹೋದಳು.

    ಮನೆಯಲ್ಲಿ ಯಾರೂ ಇರಲಿಲ್ಲ. ಇದನ್ನು ಗಮನಿಸಿಯೇ ದರೋಡೆಕೋರರು ಮನೆಯೊಳಕ್ಕೆ ನುಗ್ಗಿದ್ದರು. ಮನೆಯಲ್ಲಿರುವ ವಸ್ತುಗಳನ್ನು ನೀಡುವಂತೆ ಬಾಲಕಿಗೆ ಬೆದರಿಕೆ ಒಡ್ಡಿದರು. ಇದನ್ನೆಲ್ಲಾ ನೇರವಾಗಿ ಇತರರು ನೋಡುತ್ತಲೇ ಇದ್ದರು.

    ಇಷ್ಟು ಹೊತ್ತಿಗಾಗಲೇ ಬಾಲಕಿ ಆನ್​ಲೈನ್​ ಕ್ಲಾಸ್​ನಲ್ಲಿ ಇರುವುದನ್ನು ಕಳ್ಳರು ನೋಡಿದ್ದಾರೆ. ಕೂಡಲೇ ಲ್ಯಾಪ್​ಟಾಪ್​ ಬಂದ್​ ಮಾಡಿದ್ದಾರೆ.

    ಇದನ್ನೂ ಓದಿ: ಅಮೆರಿಕದ 400 ಸಿರಿವಂತರ ಪಟ್ಟಿಯಲ್ಲಿ, ಭಾರತೀಯ ಮೂಲದವರೆಷ್ಟು, ಅವರ ಆಸ್ತಿಯೆಷ್ಟು ಗೊತ್ತಾ?

    ಕೂಡಲೇ ವಿದ್ಯಾರ್ಥಿಗಳು ಪೊಲೀಸರಿಗೆ ಕರೆ ಮಾಡಲು ಆಕೆಯ ವಿಳಾಸ ಹಾಗೂ ಮೊಬೈಲ್​ ನಂಬರ್​ ಕೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಯಾರ ಬಳಿಯಾದರೂ ಬಾಲಕಿ ಪಾಲಕರ ಮೊಬೈಲ್​ ನಂಬರ್​ ಇದೆಯೆ? ಅವರ ಮನೆಯ ವಿಳಾಸ ಇದೆಯೆ ಎಂದು ಕೇಳಿದಾಗ, ವಿದ್ಯಾರ್ಥಿಯೊಬ್ಬ ಮಾರಿಯಾಳ ನಂಬರ್​ ನನ್ನ ಬಳಿ ಇದೆ ಎನ್ನುತ್ತಾನೆ. ಕೊನೆಗೆ ಆಕೆಗೆ ಕೂಡಲೇ ಕರೆ ಮಾಡಿ ಎಂದು ಶಿಕ್ಷಕರು ಹೇಳುತ್ತಾರೆ.

    ಆನ್​ಲೈನ್​ ಕ್ಲಾಸ್​ ಆನ್​ ಇದ್ದುದ್ದರಿಂದ ತಮ್ಮನ್ನು ಎಲ್ಲರೂ ಗಮನಿಸಿರುವುದು ತಿಳಿಯುತ್ತಲೇ ಪೊಲೀಸರು ಬರುವುದರೊಳಗೆ ಕಳ್ಳರು ಅಲ್ಲಿಂದ ಕಾಲುಕಿತ್ತಿದ್ದಾರೆ. ಆದರೆ ಅದಾಗಲೇ 2.9ಲಕ್ಷ ರೂಪಾಯಿ, ಮೊಬೈಲ್​ ಫೋನ್​, ಲ್ಯಾಪ್​ಟಾಪ್​, ವಿಡಿಯೋ ಗೆಮ್ಸ್​ ಎಲ್ಲವನ್ನೂ ಕದ್ದುಕೊಂಡು ಹೋಗಿದ್ದಾರೆ.

    ಆನ್​ಲೈನ್​ ಪರಿಶೀಲಿಸಿದ ಪೊಲೀಸರು ಲೂಯಿಸ್ ಸಿ, ವ್ಯಾಲೆಂಟಿನ್ ಪಿ, ಕಾರ್ಲೋಸ್ ಎ ಮತ್ತು ಡೋರಿಯನ್ ಆರ್ ಎಂಬ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ವಿಡಿಯೋ ಇದೀಗ ಸಕತ್ ವೈರಲ್​ ಆಗಿದೆ.

    11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

    ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts