ಪದ್ಮ ನದಿಯಲ್ಲಿ ಬೋಟ್​ ಮುಳುಗಡೆ; ದುರಂತದಲ್ಲಿ 8 ಮಂದಿ ಮೃತ್ಯು

Boat
ಸಾಂದರ್ಭಿಕ ಚಿತ್ರ
Published on

ಢಾಕಾ: ಪ್ರಯಾಣಿಕರನ್ನೂ ಹೊತ್ತು ಸಾಗುತ್ತಿದ್ದ ಬೋಟ್​ ಒಂದೂ ಮರಳು ತುಂಬಿದ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರೂ ಮಕ್ಕಳೂ ಸೇರಿದಂತೆ ಎಂಟು ಮಂದಿ ಮೃತಪಟ್ಟಿರುವ ಘಟನೆ ಬಾಂಗ್ಲಾದೇಶದ ಪದ್ಮಾ ನದಿಯಲ್ಲಿ ನಡೆದಿದೆ.

ಢಾಕಾದ ಮುನ್ಷಿಗಂಜ್​ ಜಿಲ್ಲೆಯಲ್ಲಿ ಆಗಸ್ಟ್​ 05ರ ಶನಿವಾರ ರಾತ್ರಿ 8:30ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ಲೌಹಾಜಂಗ್​ ವಿಭಾಗದ ಅಗ್ನಿಶಾಮಕ ಇಲಾಖೆ ಅಧಿಕಾರಿ ಖೈಸ್​ ಅಹ್ಮದ್​ ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ಖೈಸ್​ ಅಹ್ಮದ್ ಬೋಟಿನಲ್ಲಿ ಒಟ್ಟು 46 ಪ್ರಯಾಣಿಕರಿದ್ದರೂ ಎಂದು ತಿಳಿದು ಬಂದಿದೆ. ಇಲ್ಲಿಯವರೆಗೂ ಮೂವರೂ ಮಕ್ಕಳೂ ಸೇರಿದಂತೆ ಎಂಟು ಮಂದಿಯ ಮೃತದೇಹಗಳನ್ನೂ ಹೊರ ತೆಗೆದಿದ್ದೇವೆ. ಪ್ರತಿಕೂಲ ವಾತಾವರಣದಿಂದಾಗಿ ನದಿಯಲ್ಲಿ ನಿಂತಿದ್ದ ಬೋಟ್​ ನಾಪತ್ತೆಯಾದ ಪರಿಣಾಮ ರಕ್ಷಣಾ ಕಾರ್ಯಾಚರಣೆಯನ್ನೂ ಮತ್ತಷ್ಟು ಚುರುಕುಗೊಳಿಸಲಾಗಿದೆ.

ಸಿರಾಜ್​ ದಿಖಾನ್​ ಪ್ರದೇಶದಿಂದ ಪ್ರವಾಸಕ್ಕೆ ಆಗಮಿಸಿದ್ದ ಜನರು ದಿನವಿಡಿ ಬೋಟ್​ನಲ್ಲಿ ಪಿಕ್​ನಿಕ್​ಗೆ ತೆರಳಿದ್ದರೂ. ಬೋಟ್​ ಹಡಗಿಗೆ ಡಿಕ್ಕಿ ಹೊಡೆದ ಪರಿಣಾಮ ನೀರಿನಲ್ಲಿ ಮುಳುಗಿದೆ. ಅದರಲ್ಲಿದ್ದ ಬಹುತೇಕರು ಈಜಿ ದಡ ಸೇರಿದ್ದಾರೆ. ಉಳಿದಿರುವವರಿಗೆ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಲೌಹಾಜಂಗ್​ ವಿಭಾಗದ ಅಗ್ನಿಶಾಮಕ ಇಲಾಖೆ ಅಧಿಕಾರಿ ಖೈಸ್​ ಅಹ್ಮದ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net