

ಆಂಧ್ರಪ್ರದೇಶ: ಭಾರತೀಯ ಚಿತ್ರರಂಗದಲ್ಲಿ ಇದೀಗ ಸೂಪರ್ಸ್ಟಾರ್ಗಳು ಅಭಿನಯದ ಹಳೇ ಚಿತ್ರಗಳು ಸೇರಿದಂತೆ ಥಿಯೇಟರ್ಗಳಲ್ಲಿ ಬ್ಲಾಕ್ಬಸ್ಟರ್ ಹಿಟ್ ಆದ ಸಿನಿಮಾಗಳನ್ನು ಮರು ಬಿಡುಗಡೆಗೊಳಿಸುವ ಟ್ರೆಂಡ್ ಕಳೆದ ಕೆಲವು ದಿನಗಳಿಂದ ಪ್ರಾರಂಭಗೊಂಡಿದೆ.
ಇದಕ್ಕೆ ಉದಾಹರಣೆಯಂತೆ ಸೂರ್ಯ, ಪ್ರಿನ್ಸ್ ಮಹೇಶ್ ಬಾಬು ಮತ್ತು ತಲೈವಾ ರಜನಿಕಾಂತ್ ನಟನೆಯ ಸೂಪರ್ಹಿಟ್ ಚಿತ್ರಗಳು ಪ್ರೇಕ್ಷಕರ ಮುಂದೆ ಮತ್ತೊಮ್ಮೆ ಹಾಜರಾಗಿ, ಮನರಂಜಿಸಿದೆ. ಇದೀಗ ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.
ಸೆಲ್ವರಾಘವನ್ ನಿರ್ದೇಶನದ ಲವ್ ಸ್ಟೋರಿ '7/ಜಿ ರೇನ್ಬೋ ಕಾಲೋನಿ' ಚಿತ್ರ ಇದೀಗ ಮರು ಬಿಡುಗಡೆಯಾಗಲು ಅಧಿಕೃತ ದಿನಾಂಕದೊಂದಿಗೆ ಪ್ರಕಟವಾಗಿದೆ. ಈ ಹಿಂದೆ ಇದರ ಬಗ್ಗೆ ಕೇಳಿಬಂದಿದ್ದ ವದಂತಿಗಳಿಗೆ ಚಿತ್ರತಂಡ ಈಗ ರಿಲೀಸ್ ಡೇಟ್ ತಿಳಿಸುವ ಮುಖೇನ ತೆರೆ ಎಳೆದಿದೆ. ಡಾಲ್ಬಿ ಅಟ್ಮಾಸ್ ತಂತ್ರಜ್ಞಾನದೊಂದಿಗೆ ಚಲನಚಿತ್ರದ 4K ಆವೃತ್ತಿಯು ಸೆಪ್ಟೆಂಬರ್ 22, 2023 ರಂದು ಥಿಯೇಟರ್ಗಳಲ್ಲಿ ರಿ-ರಿಲೀಸ್ ಆಗಲಿದೆ.
2004 ರಲ್ಲಿ ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಂಡು ಪ್ರೇಕ್ಷಕರ ಮನಗೆದ್ದಿದ್ದ ಈ ಚಿತ್ರವು, ಇದೀಗ 19 ವರ್ಷಗಳ ನಂತರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುವ ಮುಖೇನ ಸಿನಿಪ್ರೇಕ್ಷಕರ ಮುಂದೆ ರಾರಾಜಿಸಲಿದೆ. ಚಿತ್ರದಲ್ಲಿ ರವಿಕೃಷ್ಣ ಮತ್ತು ಸೋನಿಯಾ ಅಗರ್ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).