ಬೈಕ್‌ ಬೆಲೆ 60 ಸಾವಿರ- ಫ್ಯಾನ್ಸಿ ನಂಬರ್‌ಗೆ ಖರ್ಚು ಮಾಡಿದ್ದು ಕೇಳಿದ್ರೆ ಗಾಬರಿ ಬೀಳ್ತೀರಾ!

fancy number
Published on

ಕಂಗ್ರಾ (ಹಿಮಾಚಲ ಪ್ರದೇಶ): ಕೆಲವರಿಗೆ ತಮ್ಮ ವಾಹನಕ್ಕೆ ಇಂಥದ್ದೇ ನಂಬರ್‌ ಬೇಕು ಎನ್ನುವ ಆಸೆ. ಇಂಥ ಫ್ಯಾನ್ಸಿ ನಂಬರ್‌ಗಾಗಿ ಎಷ್ಟು ಬೇಕಾದರೂ ಖರ್ಚು ಮಾಡೋಕೆ ರೆಡಿ ಇರ್ತಾರೆ.

ಹಾಗೆಂದು ಸಾವಿರಾರು ರೂಪಾಯಿ ಬೆಲೆ ಬಾಳುವ ಗಾಡಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ? ಇಲ್ಲಿದ್ದಾನೆ ನೋಡಿ ಅಂಥದ್ದೊಂದು ಪುಣ್ಯಾತ್ಮ; ಕಾಂಗಡಾದ ರಾಹುಲ್​​ ಪ್ರೈಮ್​​ ಪ್ರೈವೇಟ್​ ಲಿಮಿಟೆಡ್ ಕಂಪನಿಯ ಲೀಕ ಇಂಥದ್ದೊಂದು ಸಾಹಸಕ್ಕೆ ಹೈಹಾಕಿದ್ದಾನೆ.

ಹಿಮಾಚಲ ಪ್ರದೇಶದ ಕಂಗ್ರಾ ಊರಿನ ಫ್ಯಾನ್ಸಿ ನಂಬರ್‌ ಕ್ರೇಜ್‌ ಹಚ್ಚಿಸಿಕೊಂಡಿದ್ದ ವ್ಯಕ್ತಿಯೊಬ್ಬ ತನ್ನ 60 ಸಾವಿರ ರೂಪಾಯಿ ಬೈಕ್‌ಗೆ 18 ಲಕ್ಷ ರೂಪಾಯಿ ಕೊಟ್ಟು ಫ್ಯಾನ್ಸಿ ನಂಬರ್‌ ಪಡೆದಿದ್ದಾನೆ. ಕರೆಕ್ಟಾಗಿ ಹೇಳುವುದಾದರೆ 18 ಲಕ್ಷದ 22 ಸಾವಿರದ 500 ರೂಪಾಯಿ ಖರ್ಚು ಮಾಡಿದ್ದಾನೆ.

ಹೆಚ್​ಪಿ 90-0009 ಎಂಬ ನಂಬರ್​ ಪಡೆಯಲು ಈತ ಇಷ್ಟೊಂದು ದುಡ್ಡು ಖರ್ಚು ಮಾಡಿದ್ದಾನೆ! ಈ ಫ್ಯಾನ್ಸಿ ನಂಬರ್‌ಗಾಗಿ ಬಿಡ್‌ ಕರೆದಿತ್ತು. ಅದರಲ್ಲಿ ಭಾಗವಹಿಸಿದ್ದ ಹಲವರ ಪೈಕಿ ಈತನದ್ದು ಅತಿ ಹೆಚ್ಚಿನ ಮೊತ್ತವಾಗಿರುವ ಕಾರಣ, ಇವನಿಗೆ ಈ ನಂಬರ್‌ ಸಿಕ್ಕಿದೆ.

ಈ ಸಂಖ್ಯೆ ಪಡೆಯುವುದಕ್ಕಾಗಿ 10-15 ಲಕ್ಷ ರೂಪಾಯಿ ನೀಡಲು ಕೂಡ ಅನೇಕ ಮಂದಿ ತಯಾರಿದ್ದರು ಎನ್ನುತ್ತಾರೆ ಬಿಡ್‌ ಕರೆದಿದ್ದ ಎಸ್‌ಡಿಎಂ ಕಂಗ್ರಾ ಮುರಳಿ ಲಿಮಿಟೆಡ್‌. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net